ಕರ್ನಾಟಕ

karnataka

ETV Bharat / bharat

ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ; ಮಗುವಿಗೆ ಜನ್ಮ ನೀಡಿದ ಬಾಲಕಿ - ಪೋಕ್ಸೋ ಕಾಯ್ದೆ

ಮಹಾರಾಷ್ಟ್ರದ ಯವತ್ಮಾಲ್​ ಜಿಲ್ಲೆಯಲ್ಲಿ ಅಪ್ರಾಪ್ತೆಯ ಸ್ನೇಹ ಮಾಡಿ ಪ್ರೀತಿ ಹೆಸರಲ್ಲಿ ಯುವಕನೋರ್ವ ಆಕೆಯನ್ನು ಗರ್ಭಿಣಿಯಾಗಿಸಿದ್ದಾನೆ.

mh-minor-girl-gave-birth-to-a-baby-after-physical-abuse-in-yavatmal
ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ... ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

By

Published : Dec 14, 2022, 6:14 PM IST

ಮುಂಬೈ(ಮಹಾರಾಷ್ಟ್ರ): ಪ್ರೀತಿಯ ಹೆಸರಲ್ಲಿ ಯುವಕನೋರ್ವ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭಿಣಿಯಾಗಿಸಿದ್ದಾನೆ. ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಹಾರಾಷ್ಟ್ರದ ಯವತ್ಮಾಲ್​ ಜಿಲ್ಲೆಯಲ್ಲಿ ಘಟನೆ ನಡೆದಿದೆ.

23 ವರ್ಷದ ನಿಕೇಶ್​​ ರಾವ್​ ಉಕೇ ಎಂಬಾತ ನೆರೆಮನೆಯ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ನಿಕೇಶ್ ಕಳೆದ ಫೆಬ್ರವರಿಯಲ್ಲಿ​ ಅಪ್ರಾಪ್ತೆಯೊಂದಿಗೆ ಸ್ನೇಹ ಮಾಡಿ, ಆಕೆಯನ್ನು ಪ್ರೀತಿಸುವುದಾಗಿ ಹೇಳಿದ್ದ. ಇದರಿಂದ ಬಾಲಕಿ ಆತನೊಂದಿಗೆ ಸಲುಗೆಯಿಂದಿದ್ದಳು. ನಾಲ್ಕು ತಿಂಗಳ ಹಿಂದೆ ಇದನ್ನು ಗಮನಿಸಿದ್ದ ಬಾಲಕಿಯ ಹಿರಿಯ ಸಹೋದರಿ ತಾಯಿಗೆ ವಿಷಯ ತಿಳಿಸಿದ್ದಳು. ಆಗ ತಾಯಿ ಬುದ್ಧಿಮಾತು ಹೇಳಿದ್ದಳು.

ಅಂದಿನಿಂದ ಬಾಲಕಿ ನಿಕೇಶ್​ನೊಂದಿಗೆ ಹೋಗುವುದಿಲ್ಲ ಎಂದು ಹೇಳಿ ಮನೆಯಲ್ಲೇ ಇದ್ದಳು. ಇತ್ತ, ಕುಟುಂಬಸ್ಥರು ಕೂಡ ತಮ್ಮ ಕೆಲಸಗಳಿಗೆ ಮನೆಯಿಂದ ತೆರಳುತ್ತಿದ್ದರು. ಆದರೆ, ಇದರ ನಡುವೆ ಡಿ.8ರಂದು ತಾಯಿ ಕೆಲಸದಿಂದ ಮನೆಗೆ ಮರಳಿದಾಗ ಮನೆಯಲ್ಲಿ ಬಾಲಕಿ ಇರಲಿಲ್ಲ. ಹೀಗಾಗಿ ಆಕೆಯನ್ನು ಹುಡುಕಿಕೊಂಡು ತಾಯಿ, ನಿಕೇಶ್ ಮನೆಗೂ ಹೋಗಿದ್ದಳು.

ಈ ವೇಳೆ ನಿಕೇಶ್​ ಮನೆಯಲ್ಲಿ ಬಾಲಕಿ ಹೆರಿಗೆ ನೋವಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ನಿಕೇಶ್​ನ ಸಹೋದರಿಯೂ ಮನೆಯಲ್ಲಿದ್ದಳು. ಆಗ ಎಲ್ಲರೂ ಸೇರಿಕೊಂಡು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮಗುವಿಗೆ ಜನ್ಮ ನೀಡಿದ 13 ವರ್ಷದ ಅತ್ಯಾಚಾರ ಸಂತ್ರಸ್ತೆ: ಕೂಸು ನಿರಾಕರಿಸಿದ ಸಂತ್ರಸ್ತೆ ತಂದೆ

ABOUT THE AUTHOR

...view details