ನವದೆಹಲಿ: ಪತ್ರಿಕಾ ಮತ್ತು ವಿದ್ಯುನ್ಮಾನ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿನ ಅವ್ಯವಸ್ಥೆಯನ್ನು ತಡೆಯಲು ಶಾಸನಬದ್ಧ ಅಧಿಕಾರದ 'ಮಾಧ್ಯಮ ಮಂಡಳಿ'ಯನ್ನು ಸ್ಥಾಪಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.
ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ನೇತೃತ್ವದ ಸಮಿತಿ ತನ್ನ ವರದಿಯನ್ನು ನಿನ್ನೆ ಸಂಸತ್ತಿಗೆ ಸಲ್ಲಿಸಿದೆ. ಮೀಡಿಯಾ ಕೌನ್ಸಿಲ್ ಸ್ಥಾಪನೆಗೆ ಒಮ್ಮತ ಸಾಧಿಸಲು ತಜ್ಞರನ್ನು ಒಳಗೊಂಡ ಮಾಧ್ಯಮ ಆಯೋಗವನ್ನು ಸ್ಥಾಪಿಸಲು ಸಲಹೆ ನೀಡಿದ್ದಾರೆ.
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಏಜೆನ್ಸಿ ಮಾಧ್ಯಮದ ನಿಯಂತ್ರಣವನ್ನು ನಿಯಂತ್ರಿಸುತ್ತದೆ. ಆದರೆ ಇದು ಯಥಾಸ್ಥಿತಿಗೆ ಸೀಮಿತವಾಗಿದೆ. 'ಪೇಯ್ಡ್ ನ್ಯೂಸ್' ಅನ್ನು ಚುನಾವಣಾ ಅಪರಾಧವನ್ನಾಗಿ ಮಾಡುವ ಕಾನೂನು ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಸಮಿತಿ ಕೋರಿದೆ.