ಕರ್ನಾಟಕ

karnataka

ETV Bharat / bharat

Mann ki baat: ದೇಶದ ಜನತೆಯನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿ ಮನದ ಮಾತು - ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಂಗಳ ರೇಡಿಯಾ ಕಾರ್ಯಕ್ರಮ ಮನ್ ಕಿ ಬಾತ್‌ನಲ್ಲಿ ದೇಶದ ಜನತೆಯನ್ನುದ್ದೇಶಿ ಇಂದು ಮಾತನಾಡಲಿದ್ದಾರೆ.

mann-ki-baat-on-29-august-2021
Mann ki baat: ದೇಶದ ಜನತೆಯನ್ನುದ್ದೇಶಿಸಿ ಇಂದು ಪ್ರಧಾನಿ ಮೋದಿ ಮನದ ಮಾತು

By

Published : Aug 29, 2021, 6:41 AM IST

ನವದೆಹಲಿ: ಆಕಾಶವಾಣಿಯ ಜನಪ್ರಿಯ ತಿಂಗಳ ಕೊನೆಯ ಭಾನುವಾರದ ಮನದ ಮಾತು ( ಮನ್ ಕಿ ಬಾತ್‌) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಾತನಾಡಲಿದ್ದಾರೆ. ಇದು ಪ್ರಧಾನಿ ಅವರ 80ನೇ ಆವೃತ್ತಿಯ ಕಾರ್ಯಕ್ರಮವಾಗಿದ್ದು, ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆಲ್‌ ಇಂಡಿಯಾ ರೇಡಿಯಾದ ಎಲ್ಲಾ ಚಾನಲ್‌ಗಳು ಹಾಗೂ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

AIR ನ್ಯೂಸ್‌ ವೆಬ್‌ಸೈಟ್‌ನ www.newsonair.com ಮತ್ತು ನ್ಯೂಸ್‌ newsonair ಮೊಬೈಲ್‌ ಆ್ಯಪ್‌ನಲ್ಲೂ ಮನ್‌ ಕಿ ಬಾತ್‌ ಪ್ರಸಾರವಾಗಲಿದೆ. ಜೊತೆಗೆ ಎಐಆರ್‌, ಡಿಡಿ ನ್ಯೂಸ್‌ ಯೂಟ್ಯೂಬ್‌ನ ಲೈವ್‌ ಸ್ಟ್ರೀಮ್‌ನಲ್ಲೂ ಪ್ರಧಾನಿ ಮೋದಿ ಅವರ ಮನದ ಮಾತುಗಳನ್ನು ಕೇಳ ಬಹುದು.

ಮುಂದಿನ ಆವೃತ್ತಿಯ ಮನ್‌ ಕಿ ಬಾತ್‌ನಲ್ಲಿ ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂಬುದರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಪ್ರಧಾನಿ ದೇಶದ ಜನತೆಗೆ ಕರೆ ನೀಡಿದ್ದರು.

ABOUT THE AUTHOR

...view details