ಜಮ್ಮು-ಕಾಶ್ಮೀರ್: ಗುರುವಾರ ರಜೌರಿ ಜಿಲ್ಲೆಯ ಮೇಲ್ಭಾಗದಲ್ಲಿ ಸಿಡಿಲು ಮತ್ತು ಗುಡುಗು ಸಹಿತ ಮಳೆಯಿಂದಾಗಿ ಒಬ್ಬರು ಗಾಯಗೊಂಡಿದ್ದಾರೆ ಮತ್ತು ಮೂರು ಕುದುರೆಗಳ ಜೊತೆಗೆ ಸುಮಾರು 50 ಕುರಿಗಳು ಮೃತಪಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಡಿಲು - ಗುಡುಗು ಸಹಿತ ಮಳೆಗೆ ಮೂರು ಕುದುರೆ ಸೇರಿ 50 ಕುರಿಗಳ ಸಾವು, ವ್ಯಕ್ತಿಗೆ ಗಾಯ - ಸಿಡಿಲು ಮತ್ತು ಗುಡುಗು ಸಹಿತ ಮಳೆಯಿಂದಾಗಿ ಒಬ್ಬರು ಗಾಯ
ಕಣಿವೆ ನಾಡಿನಲ್ಲಿ ಸಿಡಿಲು-ಗುಡುಗು ಸಹಿತ ಮಳೆಗೆ 50 ಕುರಿ ಮೃತಪಟ್ಟಿದ್ದು, ವ್ಯಕ್ತಿಯೊಬ್ಬ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಿಡಿಲು-ಗುಡುಗು ಸಹಿತ ಮಳೆಗೆ ಮೂರು ಕುದುರೆಗಳು ಸೇರಿ 50 ಕುರಿ ಮೃತ
ಗಾಯಗೊಂಡ ವ್ಯಕ್ತಿಯನ್ನು ಫೈಜ್ ಹುಸೇನ್ ಅವರ ಮಗ ಮೊಹಮ್ಮದ್ ಜುನೈದ್ ಎಂದು ಗುರುತಿಸಲಾಗಿದೆ. ರಜೌರಿ ಜಿಲ್ಲೆಯ ಥಾನಮಂಡಿ ಪ್ರದೇಶದ ಬಾರಿ ಬೆಹೆಕ್ ಷಾ ದಾರಾ ಟಾಪ್‌ನಲ್ಲಿ ಈ ಘಟನೆ ನಡೆದಿದೆ. ಈ ಜಾನುವಾರುಗಳು ನಿಸಾರ್ ಹುಸೇನ್ ಮತ್ತು ಇತರ ಇಬ್ಬರು ಗಂಭೀರ್ ಮುಘಲನ್ ನಿವಾಸಿಗಳಿಗೆ ಸೇರಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದು, ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ:ಭಾರಿ ಮಳೆಗೆ ಗೋಡೆ ಕುಸಿದು ಹಲವಾರು ಕಾರುಗಳು ಜಖಂ.. ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು!