ಕರ್ನಾಟಕ

karnataka

ETV Bharat / bharat

ಪ್ರತಿದಿನ ಬ್ಯಾಟ್​ನಿಂದ ಹೊಡಿತಾಳೆ ಹೆಂಡ್ತಿ.. ಕೋರ್ಟ್​ ಮೆಟ್ಟಿಲೇರಿದ ಹೆಡ್​ಮಾಸ್ಟರ್​- ವಿಡಿಯೋ - ಪತ್ನಿಯ ಹಿಂಸೆಯ ವಿರುದ್ಧ ಪತಿ ದೂರು

ಮನೆಯ ಆಸ್ತಿಗಾಗಿ ತನ್ನ ಹೆಂಡತಿ ತನ್ನನ್ನು ಹಿಂಸಿಸುತ್ತಿದ್ದಾಳೆ. ಆಕೆಯಿಂದ ನನಗೆ ಭದ್ರತೆ ನೀಡಬೇಕು ಎಂದು ಕೋರಿ ಮುಖ್ಯೋಪಾಧ್ಯಾಯರೊಬ್ಬರು ಕೌಟುಂಬಿಕ ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ದೂರು ನೀಡಿದ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

man-files-plea-against
ದಾವೆ ಹೂಡಿದ ರಾಜಸ್ತಾನದ ಶಿಕ್ಷಕ

By

Published : May 24, 2022, 8:13 PM IST

Updated : May 24, 2022, 9:32 PM IST

ಭಿವಾಂಡಿ(ರಾಜಸ್ಥಾನ):ಪುರುಷರಿಂದ ಕಿರುಕುಳಕ್ಕೊಳಗಾದ ಮಹಿಳೆಯರು ಕೇಸ್​ ದಾಖಲಿಸುವುದನ್ನು ನೋಡಿದ್ದೇವೆ. ಆದರೆ, ರಾಜಸ್ತಾನದಲ್ಲಿ ಈ ಕೇಸ್ ಉಲ್ಟಾ ಆಗಿದೆ. ಪತ್ನಿಯೇ ತನ್ನನ್ನು ಹೊಡೆದು ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ತನಗೆ ಭದ್ರತೆ ನೀಡಬೇಕು ಎಂದು ಕೋರಿ ಮುಖ್ಯೋಪಾಧ್ಯಾಯರೊಬ್ಬರು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸರ್ಕಾರಿ ಶಾಲೆಯ ಹೆಡ್​ಮಾಸ್ಟರ್​ ಅಜಿತ್ ಸಿಂಗ್ ಎಂಬುವರು ತನ್ನ ಪತ್ನಿಯ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ತನ್ನನ್ನು ಪತ್ನಿ ದೈಹಿಕವಾಗಿ ಹಿಂಸಿಸುತ್ತಿದ್ದಾಳೆ ಎಂದು ಸಿಸಿಟಿವಿ ದೃಶ್ಯಾವಳಿಗಳ ಸಮೇತ ಕೇಸ್​ ದಾಖಲಿಸಿದ್ದಾರೆ.

ಹಿಂಸಿಸುತ್ತಿರುವ ಪತ್ನಿಯಿಂದ ನನ್ನನ್ನು ಕಾಪಾಡಿ ಅಂತಿದ್ದಾರೆ ಹೆಡ್​ಮಾಸ್ಟರ್​

ದಿನವೂ ಹೊಡೆಯುತ್ತಾಳೆ:ಹೆಡ್​ಮಾಸ್ಟರ್​ ಅಜಿತ್​ ಸಿಂಗ್​ ಅವರು ಸೋನೆಪತ್​ನ ಸುಮನ್​ ಎಂಬುವರ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿಗೆ 9 ವರ್ಷದ ಒಂದು ಗಂಡು ಮಗುವಿದೆ. ಆರಂಭದ ದಿನಗಳಲ್ಲಿ ಚೆನ್ನಾಗಿದ್ದ ತನ್ನ ಹೆಂಡತಿ ಒಂದು ವರ್ಷದಿಂದ ನನ್ನನ್ನು ದಿನವೂ ಹೊಡೆದು ಹಿಂಸಿಸುತ್ತಿದ್ದಾಳೆ. ಕಳೆದ 1 ವರ್ಷದಿಂದ ನನ್ನ ಹೆಂಡತಿಯ ಕಿರುಕುಳ ತಾಳಲಾಗುತ್ತಿಲ್ಲ. ಸಮಾಜಕ್ಕೆ ಅಂಜಿ ನಾನು ಈವರೆಗೂ ಸುಮ್ಮನಿದ್ದೆ. ಅಲ್ಲದೇ, ನನ್ನ ಮಗನ ಜೀವನ ಹಾಳಾಗಬಾರದು ಎಂದು ಇದನ್ನು ನಾನು ಯಾರಿಗೂ ಹೇಳಿರಲಿಲ್ಲ. ಈ ಮಧ್ಯೆ ಆಕೆಯ ಕಾಟ ಹೆಚ್ಚಾಗಿದೆ. ಒಂದು ತಿಂಗಳಿಂದ ನಾನು ಮನೆಗೇ ಹೋಗಿಲ್ಲ. ಅಜ್ಞಾತವಾಗಿ ಜೀವನ ಸಾಗಿಸುತ್ತಿದ್ದೇನೆ ಎಂದು ಅಜಿತ್​ ಸಿಂಗ್​ ಹೇಳಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯ ಸಾಕ್ಷಿ ನೀಡಿದ ಸಂತ್ರಸ್ತ:ತನ್ನ ಹೆಂಡತಿ ಹಲ್ಲೆ ನಡೆಸುತ್ತಿರುವ ಮನೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅಜಿತ್​ ಸಿಂಗ್​ ಕೋರ್ಟ್​ಗೆ ನೀಡಿದ್ದಾರೆ. ವಿಡಿಯೋದಲ್ಲಿರುವಂತೆ ಮಹಿಳೆ ಕೈಯಲ್ಲಿ ಬ್ಯಾಟ್​ ಹಿಡಿದುಕೊಂಡು ಅಜಿತ್​ ಸಿಂಗ್​ರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿರುವುದು ದಾಖಲಾಗಿದೆ. ಹೊಡೆಯಬೇಡ ಎಂದು ಎಷ್ಟೇ ಕೇಳಿಕೊಂಡರೂ ಬಿಡದ ಆ ಮಹಿಳೆ ಥಳಿಸಿದ್ದಾರೆ. ಈ ವೇಳೆ ಮಗನೂ ಕೂಡ ತಂದೆಯ ಸಹಾಯಕ್ಕೆ ಬಂದರೂ ಸಹ ಅಜಿತ್​ಸಿಂಗ್​ ಮೇಲೆ ನಿರಂತರ ಹಲ್ಲೆ ನಡೆಸಿದ್ದಾಳೆ.

ಫ್ಲ್ಯಾಟ್​ಗಾಗಿ ಈ ಕೃತ್ಯ:ತನ್ನ ಹೆಂಡತಿ ಈ ರೀತಿ ಮಾಡಲು ಕಾರಣ ತಮ್ಮ ಮನೆ. ನನ್ನ ಹೆಸರಿನಲ್ಲಿರುವ ಮನೆಯನ್ನು ಅವಳ ಹೆಸರಿಗೆ ಮಾಡಿಸುವಂತೆ ಪ್ರತಿದಿನವೂ ತಕರಾರು ತೆಗೆಯುತ್ತಾಳೆ. ಈ ವೇಳೆ ಕೋಪಗೊಂಡು ದಿನವೂ ಹೊಡೆಯುತ್ತಾಳೆ. ಇದಕ್ಕೆ ಅಮೆರಿಕದಲ್ಲಿರುವ ಆಕೆಯ ಅಣ್ಣನ ಬೆಂಬಲವಿದೆ. ಹೀಗಾಗಿ ಆಕೆ ನನ್ನನ್ನು ಹಿಂಸಿಸುತ್ತಿದ್ದಾಳೆ ಎಂದು ಅಜಿತ್​ಸಿಂಗ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಭದ್ರತೆ ನೀಡಲು ಕೋರ್ಟ್​ ಆದೇಶ:ಒಂದು ತಿಂಗಳಿನಿಂದ ತಾನು ಮನೆಗೇ ಹೋಗಿಲ್ಲ. ಮಗ ಮತ್ತು ಹೆಂಡತಿಯ ಜೀವನ ವೆಚ್ಚವನ್ನೂ ದೂರವಿದ್ದೇ ಭರಿಸುತ್ತಿದ್ದೇನೆ. ತನಗೆ ಹೆಂಡತಿಯಿಂದ ಭದ್ರತೆ ನೀಡಬೇಕು. ತಾನೊಬ್ಬ ಶಿಕ್ಷಕನಾಗಿದ್ದು, ಸಮಾಜದಲ್ಲಿ ಗೌರವದಿಂದ ಬದುಕಬೇಕಿದೆ. ಮಹಿಳೆಯ ಮೇಲೆ ಕೈಯೆತ್ತಬಾರದು ಎಂಬ ಕಾರಣದಿಂದ ತನ್ನ ಹೆಂಡತಿಯ ಹಿಂಸೆಯನ್ನು ಸಹಿಸಿಕೊಂಡಿದ್ದೇನೆ. ಇದು ಮಿತಿ ಮೀರಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ದೂರು ನೀಡಿದ ಶಿಕ್ಷಕರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.

ಓದಿ:ಸಾಧುವಿಗೆ ಮನಸೋ ಇಚ್ಛೆ ಥಳಿಸಿ, ಕೂದಲು ಕತ್ತರಿಸಿ ಯುವಕನ ದುಷ್ಕೃತ ಕೃತ್ಯ: ವಿಡಿಯೋ ವೈರಲ್​

Last Updated : May 24, 2022, 9:32 PM IST

ABOUT THE AUTHOR

...view details