ಕೋಲ್ಕತ್ತಾ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮೇಲೆ ಪ್ರಭಾವ ಬೀರಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಟ್ವಿಟರ್ ಅನ್ನು ನಿಯಂತ್ರಿಸಲು ಬಯಸುವ ಕೇಂದ್ರದ ಯತ್ನವನ್ನು ನಾನು ಖಂಡಿಸುತ್ತೇನೆ. ಟ್ವಿಟರ್ ನಿಯಂತ್ರಿಸಲು ಕೇಂದ್ರಕ್ಕೆ ಎಂದಿಗೂ ಸಾಧ್ಯವಿಲ್ಲ, ಆದ್ದರಿಂದ ಅವರು ಅದನ್ನು ಸದೆಬಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಿರ್ವಹಿಸಲು ಸಾಧ್ಯವಾಗದ ಪ್ರತಿಯೊಬ್ಬರಿಗೂ ಹಾಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ನನ್ನನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರು ನನ್ನ ಸರ್ಕಾರವನ್ನು ಸದೆಬಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ದೀದಿ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಹಿಂಸಾಚಾರವು ಮುಂದುವರೆದಿದೆ ಎಂಬ ಬಿಜೆಪಿಯ ಆರೋಪವು ‘ಕೇಸರಿ ಪಕ್ಷದ ಗಿಮಿಕ್ ಮತ್ತು ಆಧಾರ ರಹಿತ‘ ಎಂದು ಸಿಎಂ ಮಮತಾ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯದಲ್ಲಿ ಯಾವುದೇ ಹಿಂಸಾಚಾರಗಳು ನಡೆಯುತ್ತಿಲ್ಲ. ಒಂದೆರಡು ಘಟನೆ ನಡೆದರೂ, ಅವುಗಳಿಗೆ ರಾಜಕೀಯ ಹಿಂಸಾಚಾರ ಎಂದು ಹಣೆಪಟ್ಟಿ ಕಟ್ಟಲಾಗಲ್ಲ ಎಂದಿದ್ದಾರೆ.