ನವದೆಹಲಿ: ತೈಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಜನರ ಜೇಬು ಖಾಲಿ ಮಾಡುತ್ತಿದ್ದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ಶುಲ್ಕವನ್ನು ಪ್ರತಿ ಯೂನಿಟ್‌ಗೆ 3 ರೂಪಾಯಿ ಇಳಿಕೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಜನರ ಜೇಬು ಖಾಲಿ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ವಿದ್ಯುತ್ ಶುಲ್ಕವನ್ನು ಪ್ರತಿ ಯೂನಿಟ್‌ಗೆ 3 ರೂಪಾಯಿ ಇಳಿಕೆ ಮಾಡಿ ಅಲ್ಲಿನ ಜನರಿಗೆ ನೆರವಾಗುತ್ತಿದ್ದರೆ, ಬಿಜೆಪಿ ಜನರ ಜೇಬು ಖಾಲಿ ಮಾಡುತ್ತಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಕಡಿತ ಪ್ರಶಂಸಿ ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಚಾಟಿ
ಪಂಜಾಬ್‌ನಲ್ಲಿ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 4.19 ರೂಪಾಯಿ ಇದ್ದುದನ್ನು 3 ರೂಪಾಯಿ ಕಡಿತದೊಂದಿಗೆ ಕೇವಲ 1.19 ರೂಪಾಯಿಗೆ ಇಳಿಸಿದ್ದಾರೆ. ಇದು 100 ಯೂನಿಟ್‌ವರೆಗೆ ಅನ್ವಯಿಸಲಿದೆ. ಇದು ಪಂಜಾಬ್‌ನ ಶೇ 95 ರಷ್ಟು ಕುಟುಂಬಗಳಿಗೆ ಪ್ರಯೋಜವಾಗಲಿದೆ ಎಂದಿದ್ದಾರೆ. ಇದೇ ಪೋಸ್ಟ್‌ನಲ್ಲಿ ಕಾಂಗ್ರೆಸ್ = ಪರಾನುಭೂತಿ ಆಡಳಿತ ಎಂದು ಹೇಳಿಕೊಂಡಿದ್ದಾರೆ.