ನವದೆಹಲಿ :ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಏಪ್ರಿಲ್ 15ರಿಂದ ಎರಡು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅವರು ಚರ್ಚಿಸುವ ಸಾಧ್ಯತೆಗಳಿವೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಶಾಹಿದ್ ಅವರು 'ಸೂರ್ಯನಿಗೆ ಹಣಕಾಸು'(ಫೈನಾನ್ಸಿಂಗ್ ಫಾರ್ ಸನ್) ಮತ್ತು 'ಸಾಂಕ್ರಾಮಿಕದ ಬಳಿಕ ಜಾಗತಿಕ ಸಾರ್ವಜನಿಕ ಆರೋಗ್ಯ'(ಗ್ಲೋಬಲ್ ಪಬ್ಲಿಕ್ ಹೆಲ್ತ್ ಆಫ್ಟರ್ ದಿ ಪ್ಯಾಂಡಮಿಕ್) ಕುರಿತ ಸೆಷನ್ಗಳಲ್ಲಿ ವರ್ಚುವಲ್ ಮೋಡ್ ಮೂಲಕ ರೈಸಿನಾ ಸಂವಾದದಲ್ಲಿ ಭಾಗವಹಿಸಲಿದ್ದಾರೆ.