ಕೌಲಾಲಂಪುರ್: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ಅವರ ವಿರುದ್ಧ ಪ್ರಯಾಸದ ಜಯಗಳಿಸಿದರು. 7ನೇ ಶ್ರೇಯಾಂಕದ ಸಿಂಧು, ಬಿಂಗ್ ಜಿಯಾವೊ ಅವರನ್ನು 21-13 17-21 21-15 ಸೆಟ್ಗಳಲ್ಲಿ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಬಿಂಗ್ ಜಿಯಾವೊ ಅವರನ್ನು ಸೋಲಿಸಲು ಸಿಂಧು ಸುಮಾರು ಒಂದು ಗಂಟೆಕಾಲ ಸಮಯ ತೆಗೆದುಕೊಂಡರು.
7ನೇ ವಿಶ್ವಶ್ರೇಯಾಂಕದ ಪಿವಿ ಸಿಂಧು ಅವರು ಕಳೆದ ತಿಂಗಳು ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಇದೇ ಬಿಂಗ್ ಜಿಯಾವೊ ವಿರುದ್ಧ ಆಟವಾಡಿ ಮೊದಲ ಸುತ್ತಿನಲ್ಲಿಯೇ ಸೋತು ನಿರ್ಗಮಿಸಿದ್ದರು. ಆದರೆ, ಈಗ ಮಲೇಷ್ಯಾ ಮಾಸ್ಟರ್ಸ್ನಲ್ಲಿ ಜಿಯಾವೊ ಅವರನ್ನು ಮೊದಲ ಸುತ್ತಿನಲ್ಲಿಯೇ ಸೋಲಿಸಿರುವುದು ಅಂದಿನ ಸೇಡು ತೀರಿಸಿಕೊಂಡಂತಾಗಿದೆ. ಆದಾಗ್ಯೂ ಚೀನಾ ಹೆಡ್ ಟು ಹೆಡ್ನಲ್ಲಿ 10-9 ರಿಂದ ಮುಂದಿದೆ.