ವಿದಿಶಾ(ಮಧ್ಯಪ್ರದೇಶ):ಬಾವಿಯಲ್ಲಿ ಬಿದ್ದ ಮಗುವಿನ ರಕ್ಷಣೆಗೆ ಮುಂದಾದ ಸಂದರ್ಭದಲ್ಲಿ ಅದರ ಗೋಡೆ ಕುಸಿದು ಸುಮಾರು 40 ಜನರು ಅದರೊಳಗೆ ಬಿದ್ದಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ. ಘಟನೆಯಿಂದ ಇಬ್ಬರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ.
ಬಾವಿಯಲ್ಲಿ ಮಗು ಬಿದ್ದಿರುವ ಕಾರಣ ಅದರ ರಕ್ಷಣೆ ಮಾಡಲು ಬಾವಿಯ ಗೋಡೆ ಸುತ್ತಲೂ ಜನಸಮೂಹ ಸೇರಿದೆ. ಈ ವೇಳೆ ದಿಢೀರ್ ಆಗಿ ಬಾವಿಯ ಗೋಡೆ ಕುಸಿದು ಬಿದ್ದಿದೆ.
ಸ್ಥಳದಲ್ಲೇ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಜಿಲ್ಲಾಧಿಕಾರಿ ಹಾಗೂ ಸಚಿವ ವಿಶ್ವಸ್ ಸರಂಗ್ ಉಪಸ್ಥಿತರಿದ್ದಾರೆ. 40 ಜನರ ಪೈಕಿ 25 ಜನರ ರಕ್ಷಣೆ ಮಾಡಲಾಗಿದ್ದು, ಇದರಲ್ಲಿ ಗಾಯಗೊಂಡಿರುವ ಕೆಲವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿರಿ: ಮೋದಿ, ಶಾ ಭೇಟಿಗಾಗಿ BSY ಇಂದು ದೆಹಲಿ ಪ್ರಯಾಣ...ಸಂಪುಟ ಪುನರ್ರಚನೆ ಸೇರಿ ಏನೆಲ್ಲ ಚರ್ಚೆ?
ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೂಚನೆ ನೀಡಿದ್ದಾರೆ. ಜೊತೆಗೆ ತಮ್ಮ ದೆಹಲಿ ಪ್ರವಾಸ ಮೊಟಕುಗೊಳಿಸಿದ್ದಾರೆ.