ಕೊಲ್ಹಾಪುರ (ಮಹಾರಾಷ್ಟ್ರ):ಕೊಲ್ಹಾಪುರ ಜಿಲ್ಲೆಯ ಹುಪಾರಿ ಮುನ್ಸಿಪಾಲ್ ಕೌನ್ಸಿಲ್ನಲ್ಲಿ ಎಲ್ಲಾರು ಹೆಮ್ಮೆ ಪಡುವಂತಹ ಘಟನೆಯೊಂದು ನಡೆದಿದೆ. ತೃತೀಯ ಲಿಂಗಿಯೊಬ್ಬರನ್ನು ಅನುಮೋದಿತ ಕಾರ್ಪೋರೇಟರ್ ಆಗಿ ನೇಮಕ ಮಾಡಲಾಗಿದೆ. ಹೀಗೆ ಆಯ್ಕೆ ಆಗಿರುವ ಅವರ ಹೆಸರು ತಾಟೋಬಾ ಬಾಬುರಾವ್ ಹಂದೆ. ಇಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತಾರೂಢ ತಾರಾರಾಣಿ ಅಘಾಡಿ ಹಂದೆ ಅವರಿಗೆ ಈ ಗೌರವ ನೀಡಿದ್ದಾರೆ.
ಮೊದಲ ಬಾರಿಗೆ ನಗರಸಭೆ ಕಾರ್ಪೋರೇಟರ್ ಆದ ತೃತೀಯ ಲಿಂಗಿ
ಕೊಲ್ಹಾಪುರ ಜಿಲ್ಲೆಯ ಹುಪಾರಿ ನಗರಸಭೆಯಲ್ಲಿ ವಿನೂತನ ಯತ್ನ - ತಾಟೋಬಾ ಬಾಬುರಾವ್ ಹಂದೆ ಎಂಬ ತೃತೀಯ ಲಿಂಗಿ ಕಾರ್ಪೋರೇಟರ್ ಆಗಿ ಆಯ್ಕೆ
ಮೊದಲ ಬಾರಿಗೆ ನಗರಸಭೆ ಕಾರ್ಪೋರೇಟರ್ ಆದ ತೃತೀಯ ಲಿಂಗಿ
ಬಹುಮತವಿದ್ದರೆ ತೃತೀಯ ಲಿಂಗಿ ಈ ರಾಜ್ಯದ ಮುಖ್ಯಮಂತ್ರಿಯೂ ಆಗಬಹುದು ಎಂದು ಕೆಲ ದಿನಗಳ ಹಿಂದೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಹೇಳಿದ್ದರು. ಆದರೆ ಇದುವರೆಗೂ ವಾಸ್ತವದಲ್ಲಿ ರಾಜಕೀಯದಲ್ಲಿ ಇಂತಹ ಚಿತ್ರಣ ಕಂಡು ಬಂದಿಲ್ಲ. ಆದರೆ, ಇಂದು ಹುಪಾರಿ ನಗರಸಭೆ ತೃತೀಯ ಲಿಂಗಿಯೊಬ್ಬರನ್ನು ಕಾರ್ಪೋರೇಟರ್ ಆಗಿ ಆಯ್ಕೆ ಮಾಡಿದೆ. ತಾಟೋಬಾ ಹಂದೆ ಇಲ್ಲಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.
ಇದನ್ನೂ ಓದಿ:ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ: ಶೇ.94.40ರಷ್ಟು ವಿದ್ಯಾರ್ಥಿಗಳು ಪಾಸ್