ನವದೆಹಲಿ:ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡೇಟಾ ಉಲ್ಲೇಖ ಮಾಡಿ ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಲೋಕಸಭೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬ್ಯಾಂಕಿಂಗ್, ಸೈಬರ್ ವಂಚನೆಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಅಗ್ರಸ್ಥಾನದಲ್ಲಿವೆ ಎಂದು ತಿಳಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದ ಎಟಿಎಂನ ಡೆಬಿಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ 2021ರಲ್ಲಿ(ಏಪ್ರಿಲ್-ಡಿಸೆಂಬರ್) ಸುಮಾರು 50,242 ಪ್ರಕರಣಗಳು ದಾಖಲಾಗಿದ್ದು, ಕೇವಲ 9 ತಿಂಗಳಲ್ಲಿ ಗ್ರಾಹಕರು ಸುಮಾರು 167 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆಂಬ ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಹೆಚ್ಚಿನ ವಂಚನೆ ಪ್ರಕರಣ ದಾಖಲಾಗಿದ್ದಾಗಿ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಲೋಕಸಭೆಯಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿರಿ:ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಬಿಜೆಪಿ.. ಹೋಳಿ ನಂತರ ಉಚಿತ ಸಿಲಿಂಡರ್?
ಮಹಾರಾಷ್ಟ್ರದಲ್ಲಿ ಶೇ. 40ರಷ್ಟು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಂಚನೆ ಪ್ರಕರಣಗಳು ಇಲ್ಲಿ ನಡೆದಿವೆ. 19,671 ಸೈಬರ್ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಇಲ್ಲಿ ವರದಿಯಾಗಿದ್ದು, ತಮಿಳುನಾಡಿನಲ್ಲಿ 5,292 ಪ್ರಕರಣಗಳು ಹಾಗೂ ದೆಹಲಿಯಲ್ಲಿ 5,001 ಕೇಸ್ಗಳು ದಾಖಲಾಗಿವೆ.
ಉಳಿದಂತೆ ಹರಿಯಾಣದಲ್ಲಿ 4,638 ಬ್ಯಾಂಕಿಂಗ್ ಸೈಬರ್ ಪ್ರಕರಣ, ಉತ್ತರ ಪ್ರದೇಶದಲ್ಲಿ 3,082, ಕರ್ನಾಟಕದಲ್ಲಿ 2,397, ಗುಜರಾತ್ನಲ್ಲಿ 2,281, ತೆಲಂಗಾಣದಲ್ಲಿ 1,558 ವಂಚನೆ ಪ್ರಕರಣ ದಾಖಲಾಗಿದ್ದು, ಉಳಿದಂತೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಾಖಂಡ, ಪಂಜಾಬ್ ಮತ್ತು ಒಡಿಶಾ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸಾವಿರಕ್ಕಿಂತಲೂ ಕಡಿಮೆ ಪ್ರಕರಣ ದಾಖಲಾಗಿವೆ. ಸೈಬರ್ ಕ್ರೈಂ ಮತ್ತು ಬ್ಯಾಂಕಿಂಗ್ ವಂಚನೆಯಿಂದ ದೇಶದ ಯಾವುದೇ ರಾಜ್ಯ ಸುರಕ್ಷಿತವಾಗಿಲ್ಲ ಎಂದು ಡೇಟಾದಿಂದ ತಿಳಿದು ಬಂದಿದೆ.