ಮಹಾರಾಷ್ಟ್ರ: ನಿನ್ನೆ ಪಾಕ್ ಹಾಗೂ ಭಾರತೀಯ ಯೋಧರ ನಡುವೆ ನಡೆದ ಕಾಳಗದಲ್ಲಿ ದೇಶಕ್ಕೆ ಮತ್ತಷ್ಟು ಸೇವೆ ನೀಡಬೇಕು ಎಂದುಕೊಂಡಿದ್ದ 20 ರ ಹರೆಯದ ಯೋಧ ಹುತಾತ್ಮರಾಗಿದ್ದಾರೆ.
ಪಾಕಿಗಳ ಗುಂಡಿಗೆ ಹುತಾತ್ಮರಾದ 20 ರ ಹರೆಯದ ಯೋಧ! - ಅಜ್ರಾ ತಹಸಿಲ್‌ನ ಬಹಿರೇವಾಡಿ ನಿವಾಸಿಯಾಗಿ ರಿಷಿಕೇಶ್
ಅಜ್ರಾ ತಹಸಿಲ್‌ನ ಬಹಿರೇವಾಡಿ ನಿವಾಸಿಯಾಗಿ ರಿಷಿಕೇಶ್ ಅವರು 2018 ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದರು. ಜಮ್ಮುವಿನಲ್ಲಿ ತರಬೇತಿ ಪಡೆದ ನಂತರ ಅವರ ಮೊದಲ ಪೋಸ್ಟ್ ಇದಾಗಿತ್ತು. ಆದರೆ ಪಾಪಿ ಪಾಕಿಗಳ ಗುಂಡು ಇವರನ್ನು ಹುತಾತ್ಮರನ್ನಾಗಿ ಮಾಡಿದೆ.
ಪಾಕಿಗಳ ಗುಂಡಿಗೆ ಹುತಾತ್ಮರಾದ 20 ರ ಹರೆಯದ ಯೋಧ
ಗುಂಡಿನ ದಾಳಿಯಲ್ಲಿ ಕೊಲ್ಹಾಪುರ ಜಿಲ್ಲೆಯ ರಿಷಿಕೇಶ್ ಜೋಂಧಲೆ (20) ಹುತಾತ್ಮರಾಗಿದ್ದಾರೆ. ಇವರು ಅಜ್ರಾ ತಹಸಿಲ್‌ನ ಬಹಿರೇವಾಡಿ ನಿವಾಸಿಯಾಗಿದ್ದರು. ರಿಷಿಕೇಶ್ ಅವರು 2018 ರಲ್ಲಿ ಸೈನ್ಯಕ್ಕೆ ಸೇರ್ಪಡೆಗೊಂಡಿದ್ದರು. ಜಮ್ಮುವಿನಲ್ಲಿ ತರಬೇತಿ ಪಡೆದ ನಂತರ ಅವರ ಮೊದಲ ಪೋಸ್ಟ್ ಇದಾಗಿತ್ತು
ಪಾಕಿಗಳ ಗುಂಡಿಗೆ ಬಲಿಯಾದ ಸುದ್ದಿ ತಿಳಿದ ಅವರ ಗ್ರಾಮದಲ್ಲೀಗ ಸೂತಕದ ವಾತಾವರಣ ಸೃಷ್ಠಿಯಾಗಿದೆ. ದೀಪಾವಳಿ ಸಂತಸದಲ್ಲಿದ್ದ ಅವರ ಪೋಷಕರಿಗೆ ಮಗನ ಸಾವು ಅರಗಿಸಿಕೊಳ್ಳಲಾಗದ ದುಃಖವನ್ನು ನೀಡಿದೆ.
TAGGED:
ಮಹಾರಾಷ್ಟ್ರ