ಮುಂಬೈ: ಮಹಾಮಾರಿ ಕೊರೊನಾ ವೈರಸ್ ಮಹಾರಾಷ್ಟ್ರದಲ್ಲಿ ಪ್ರತಿದಿನ ಏರುಗತಿಯಲ್ಲೇ ಸಾಗಿದ್ದು, ಈ ಹಿಂದಿನಿಗಿಂತಲೂ ಅತ್ಯಧಿಕ ಸೋಂಕಿತ ಪ್ರಕರಣ ಇಂದು ದಾಖಲಾಗಿದ್ದು, ಈ ಮೂಲಕ ಹಿಂದಿನ ರೆಕಾರ್ಡ್ ಬ್ರೇಕ್ ಆಗಿದೆ.
ಕಳೆದ 24 ಗಂಟೆಯಲ್ಲಿ ದಾಖಲೆಯ 49,447 ಸೋಂಕಿತ ಪ್ರಕರಣ ದಾಖಲಾಗಿದ್ದು, ಇಷ್ಟೊಂದು ಪ್ರಕರಣ ಈ ಹಿಂದೆ ಯಾವತ್ತೂ ದಾಖಲಾಗಿಲ್ಲ. ಜತೆಗೆ ಒಂದೇ ದಿನ 227 ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಸದ್ಯ 21,57,135 ಜನರು ಹೋಂ ಕ್ವಾರಂಟೈನ್ನಲ್ಲಿದ್ದು, 18,994 ಜನರು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ಗೊಳಗಾಗಿದ್ದಾರೆ. ಸದ್ಯ ರಾಜ್ಯದಲ್ಲಿ 4,01,172 ಸಕ್ರಿಯ ಪ್ರಕರಣಗಳಿವೆ. ವಾಣಿಜ್ಯ ನಗರಿ ಮುಂಬೈನಲ್ಲಿ 9 ಸಾವಿರ ಕೋವಿಡ್ ಪ್ರಕರಣ ದಾಖಲಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಪುಣೆಯಲ್ಲಿ 10,873 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 52 ಜನರು ಸಾವನ್ನಪ್ಪಿದ್ದು, ನಾಗ್ಪುರ್ದಲ್ಲಿ 3,720 ಕೇಸ್ ದಾಖಲಾಗಿವೆ.