ಮುಂಬೈ: ಮುಂಬೈ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ರಜನೀಶ್ ಸೇಠ್ ಅವರು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಸೇಠ್ ಅವರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಪ್ರಧಾನ ಕಚೇರಿಗೆ ತೆರಳಿ ಸಂಜಯ್ ಪಾಂಡೆ ಅವರಿಂದ ಮಹಾನಿರ್ದೇಶಕ ಹುದ್ದೆಯನ್ನು ಸ್ವೀಕರಿಸಿದರು. ಇವರು 1988ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಫೋರ್ಸ್ ಒನ್ ಮಹಾರಾಷ್ಟ್ರದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.