ಔರಂಗಾಬಾದ್ (ಮಹಾರಾಷ್ಟ್ರ):ತಾನು ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಸಾಕ್ಷ್ಯ ನಾಶಪಡಿಸಲು ಅವರ ದೇಹವನ್ನು ಕತ್ತರಿಸಿದ ಆರೋಪದ ಮೇಲೆ ಪತ್ರಕರ್ತನನ್ನು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಬಂಧಿಸಲಾಗಿದೆ. ಫ್ರೀಲಾನ್ಸ್ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಸೌರಭ್ ಲಾಖೆ (35) ಬಂಧಿತ ಆರೋಪಿ.
ಜಿಲ್ಲೆಯ ಶಿಯುರ್ ನಿವಾಸಿಯಾಗಿದ್ದ 24 ವರ್ಷದ ಮಹಿಳೆ ಮೂರು ವರ್ಷದ ಮಗುವನ್ನು ಹೊಂದಿದ್ದರು. ಸೌರಭ್ ಲಾಖೆಯೊಂದಿಗೆ ಇವರು ಅನೈತಿಕ ಸಂಬಂಧ ಹೊಂದಿದ್ದರಂತೆ. ಇತ್ತೀಚೆಗೆ ಅವರು ತಮ್ಮ ಕುಟುಂಬವನ್ನು ತೊರೆದು ಮಹಾರಾಷ್ಟ್ರದ ಹುಡ್ಕೋ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಲಾಖೆ ಅವಳನ್ನು ಭೇಟಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.