ಕರ್ನಾಟಕ

karnataka

ಕೋವಿಡ್‌ ನಾಗಾಲೋಟ; ಇಂದಿನಿಂದ ಮಹಾರಾಷ್ಟ್ರ ಸಂಪೂರ್ಣ ಲಾಕ್​ಡೌನ್

By

Published : Apr 22, 2021, 5:28 AM IST

Updated : Apr 22, 2021, 6:53 AM IST

ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಇಂದು ರಾತ್ರಿ 8 ಗಂಟೆಯಿಂದ ಮೇ 1ರವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ.

Maharashtra government announce a complete lockdown
ಕೋವಿಡ್‌ ನಾಗಲೋಟ; ಇಂದಿನಿಂದ ಮಹಾರಾಷ್ಟ್ರ ಸಂಪೂರ್ಣ ಲಾಕ್​ಡೌನ್

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮಹಾರಾಷ್ಟ್ರದಲ್ಲಿ ಇಂದಿನಿಂದ ಸಂಪೂರ್ಣ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಈ ಮಾರ್ಗಸೂಚಿ ಪಾಲನೆಯಾಗಲಿದ್ದು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಶೇ.15ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಮದುವೆ ಸಮಾರಂಭಗಳಲ್ಲಿ 25 ಜನರು ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಮೇ 1ರವರೆಗೆ ಈ ನಿಯಮ ಜಾರಿಯಲ್ಲಿರಲಿದೆ.

ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಕೂಡ 67,468 ಪ್ರಕರಣಗಳು ದಾಖಲಾಗಿದ್ದು, 500ಕ್ಕೂ ಅಧಿಕ ಮಂದಿ ವೈರಸ್‌ಗೆ ಬಲಿಯಾಗಿದ್ದಾರೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈಗಾಗಲೇ ಸೆಕ್ಷನ್​ 144 ಜಾರಿಗೊಳಿಸಲಾಗಿದ್ದು, ತರಕಾರಿ, ಅಂಗಡಿ, ದಿನಸಿ ಹಾಗೂ ಹಾಲಿನ ಉತ್ಪನ್ನಗಳ ಮಳಿಗೆಗಳು ಕೇವಲ 4 ತಾಸು ತೆರೆಯುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸುಳ್ಳು ಹೇಳೋರಿಗೂ ಕೋವಿಡ್‌ ಬರುತ್ತೆ; ರಾಹುಲ್ ಪಾಸಿಟಿವ್‌ ವರದಿ ಕುರಿತು ಬಿಜೆಪಿ ನಾಯಕ ಎಡವಟ್ಟು

ಮನೆಯಿಂದಲೇ ಕೆಲಸ ಮಾಡಲು ಎಲ್ಲ ರೀತಿಯ ಸೌಲಭ್ಯ ಒದಗಿಸುವಂತೆ ಸಂಬಂಧಿತ ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ರವಾನಿಸಲಾಗಿದೆ. ಅಗತ್ಯ ಸೇವೆ ಅಥವಾ ವೈದ್ಯಕೀಯ ತುರ್ತು ಪರಿಸ್ಥಿಗಳ ಸಂದರ್ಭದಲ್ಲಿ ಖಾಸಗಿ ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಕೋವಿಡ್​ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ರೆ 50 ಸಾವಿರದವರಗೆ ದಂಡ ವಿಧಿಸುವ ಕಠಿಣ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ತುರ್ತು ಉದ್ದೇಶ ಹೊರತು ಪಡಿಸಿ ಇತರ ಸಂದರ್ಭಗಳಲ್ಲಿ ಖಾಸಗಿ ವಾಹನ ಬಳಕೆ ಮಾಡಿದರೆ 10 ಸಾವಿರ ದಂಡ ವಿಧಿಸಲಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಒಟ್ಟಾರೆ ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರ ಲಾಕ್‌ಡೌನ್‌ ವೇಳೆ ಅವಕಾಶ ಕಲ್ಪಿಸಿದೆ.

Last Updated : Apr 22, 2021, 6:53 AM IST

ABOUT THE AUTHOR

...view details