ಕರ್ನಾಟಕ

karnataka

ETV Bharat / bharat

ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಐಟಂ ಎಂದ ಯುವಕ: 18 ತಿಂಗಳ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​​

2015ರಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು ಐಟಂ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 25 ವರ್ಷದ ಉದ್ಯಮಿಯೊಬ್ಬರಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯ
ನ್ಯಾಯಾಲಯ

By

Published : Oct 25, 2022, 8:20 AM IST

ಮುಂಬೈ: ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯನ್ನು 2015ರಲ್ಲಿ ‘ಐಟಂ’ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉದ್ಯಮಿಯೊಬ್ಬರಿಗೆ 18 ತಿಂಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 25 ವರ್ಷದ ಉದ್ಯಮಿಗೆ ಮುಂಬೈನ ವಿಶೇಷ ಪೋಕ್ಸೊ ನ್ಯಾಯಾಲಯ 1.5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮೂಲಗಳ ಪ್ರಕಾರ, ಜುಲೈ 14, 2015 ರಂದು, 16 ವರ್ಷದ ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಯುವಕ ಅವಳ ಕೂದಲು ಎಳೆದು "ಕ್ಯಾ ಐಟಂ ಕಿದರ್ ಜಾ ರಹೀ ಹೋ?" ಎಂದು ಹೇಳಿದ್ದಾನೆ. ಈ ಪದವನ್ನು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಅವಹೇಳನಕಾರಿ ರೀತಿಯಲ್ಲಿ ಸಂಭೋದಿಸಲು ಬಳಸುತ್ತಾರೆ. ಏಕೆಂದರೆ ಇದು ಅವರನ್ನು ಲೈಂಗಿಕ ರೀತಿಯಲ್ಲಿ ವಸ್ತುನಿಷ್ಠಗೊಳಿಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಕೀಚಕನಿಗೆ 20 ವರ್ಷ ಜೈಲು ಶಿಕ್ಷೆ

ಅವರು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಪ್ರಾಸಿಕ್ಯೂಷನ್ ಸಹ ಸಾಬೀತುಪಡಿಸಿದೆ. ಆತನಿಗೆ ವಿನಾಕಾರಣ ಕರುಣೆ ತೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಿಶೇಷ ನ್ಯಾಯಾಧೀಶ ಎಸ್.ಜೆ.ಅನ್ಸಾರಿ ಹೇಳಿದ್ದು, ಆರೋಪಿ ಒಂದೂವರೆ ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ABOUT THE AUTHOR

...view details