ಕರ್ನಾಟಕ

karnataka

ETV Bharat / bharat

ಮದ್ಯ ಕಳ್ಳ ಸಾಗಾಟ: ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹರಿದ ಕಾರು.. ಎಎಸ್​ಐ​ ಸ್ಥಳದಲ್ಲೇ ಸಾವು - ಗೃಹ ರಕ್ಷಕ ದಳ ಜವಾನ

Liquor Smugglers Crush ASI: ಘಟನೆಯಲ್ಲಿ ಗೃಹ ರಕ್ಷಕ ದಳ ಜವಾನನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

liquor smugglers car hit ASI in begusarai in Bihar
ಮದ್ಯ ಕಳ್ಳ ಸಾಗಾಟ: ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹರಿದ ಕಾರು.. ಎಎಸ್​ಐ​ ಸ್ಥಳದಲ್ಲೇ ಸಾವು

By ETV Bharat Karnataka Team

Published : Dec 20, 2023, 1:15 PM IST

ಬೇಗುಸರಾಯ್​ (ಬಿಹಾರ): ಮದ್ಯ ಕಳ್ಳ ಸಾಗಾಟ ಮಾಡುತ್ತಿದ್ದ ವಾಹನವೊಂದು ಮಂಗಳವಾರ ಪೊಲೀಸ್​ ತಂಡದ ಮೇಲೆ ದಾಳಿ ಮಾಡಿದ್ದು, ಅಸಿಸ್ಟೆಂಟ್​ ಸಬ್​ ಇನ್​ಸ್ಪೆಕ್ಟರ್​ ಸಾವನ್ನಪ್ಪಿದ್ದು, ಗೃಹರಕ್ಷಕ ದಳದ ಜವಾನನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್​ನಲ್ಲಿ ನಡೆದಿದೆ.

ಪೊಲೀಸ್​ ಅಧಿಕಾರಿಗಳ ಪ್ರಕಾರ, ಜಿಲ್ಲೆಯ ನವೋ ಕೋಠಿ ಪೊಲೀಸ್​ ಠಾಣಾ ವ್ಯಾಪ್ತಿಯ ಛಟೌನಾ ಸೇತುವೆ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಆಧರಿಸಿ, ಎಎಸ್​ಐ ಖಾಮಸ್​ ಚೌಧರಿ ಅವರ ನೇತೃತ್ವದಲ್ಲಿ ಐವರು ಪೊಲೀಸರ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಮದ್ಯ ಸಾಗಿಸುತ್ತಿದ್ದ ಆಲ್ಟೋ ಕಾರು ಎಎಸ್​ಐ​ ಹಾಗೂ ಗೃಹರಕ್ಷಕ ದಳದ ಜವಾನನಿಗೆ ಡಿಕ್ಕಿ ಹೊಡೆದು ವೇಗವಾಗಿ ಎಸ್ಕೇಪ್​ ಆಗಿದೆ.

ರಾತ್ರಿ 12 ಗಂಟೆಯ ಸುಮಾರಿಗೆ ಛಟೌನಾ ಬುಧಿ ಗಂಡಕ್​ ನದಿ ಸೇತುವೆ ಬಳಿ ಮದ್ಯ ಕಳ್ಳ ಸಾಗಣೆ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಎಎಸ್​ಐ​ ಖಾಮಸ್​ ಚೌಧರಿ ನೇತೃತ್ವದಲ್ಲಿ ತಂಡವನ್ನು ರಚಿಸಿ, ಸ್ಥಳಕ್ಕೆ ಕಳುಹಿಸಲಾಗಿತ್ತು. ಇನ್ಸ್​​​​ಪೆಕ್ಟರ್​​ ಖಾಮಸ್​ ಚೌಧರಿ ತಮ್ಮ ತಂಡದೊಂದಿಗೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.

ತಪಾಸಣೆ ವೇಳೆ ಗೃಹ ರಕ್ಷಕ ದಳದ ಸಿಬ್ಬಂದಿ​ ಎದುರಿನಿಂದ ಬರುತ್ತಿದ್ದ ಆಲ್ಟೋ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ, ಪೊಲೀಸರನ್ನು ಕಂಡ ಕಾರು ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ, ಪೊಲೀಸರಿಗೇ ಡಿಕ್ಕಿ ಹೊಡೆದು ಮುಂದೆ ಸಾಗಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಚೌಧರಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಳಾಸಾಹೇಬ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಳಾಸಾಹೇಬ್​ ಯಾದವ್​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಗಾಯಗೊಂಡಿರುವ ಗೃಹ ರಕ್ಷಕ ದಳದ ಜವಾನ ಬಾಳಾ ಸಾಹೇಬ್​ ಯಾದವ್, "ಮಂಗಳವಾರ ರಾತ್ರಿ 12 ಗಂಟೆಗೆ ನಾನು ಹಾಗೂ ಇತರ 3 ಗೃಹ ರಕ್ಷಕ ದಳದ ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದೆವು. ಆಗ ಆಲ್ಟೋ ಕಾರು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದು, ಎಸ್ಕೇಪ್​ ಆಗಿದೆ. ಘಟನೆಯಲ್ಲಿ ಎಎಸ್​ಐ​ ಸಾವನ್ನಪ್ಪಿದ್ದಾರೆ" ಎಂದು ತಿಳಿಸಿದರು.

ಘಟನೆ ಬಗ್ಗೆ ಬೇಗುಸರಾಯ್​ ಎಸ್ಪಿ ಯೋಗೇಂದ್ರ ಕುಮಾರ್​ ಮಾಹಿತಿ ನೀಡಿದ್ದು, "ನವ್​ ಕೋಠಿ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್​ಐ ಖಾಮಸ್​ ಚೌಧರಿ ಅವರು ಕರ್ತವ್ಯದ ವೇಳೆ ಹುತಾತ್ಮರಾಗಿದರು. ರಾತ್ರಿ ಯಾರೋ ಆಲ್ಟೋ ಕಾರಿನಲ್ಲಿ ಮದ್ಯ ಸಾಗಿಸುತ್ತಿರುವ ಬಗ್ಗೆ ಠಾಣಾ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಖಮಾಸ್​ ಚೌಧರಿ ತಂಡ ಸ್ಥಳಕ್ಕೆ ತೆರಳಿದ್ದಾರೆ. ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಆಲ್ಟೋ ಕಾರೊಂದನ್ನು ಸಿಬ್ಬಂದಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರನ್ನು ನೋಡಿದ ಕೂಡಲೇ ಕಾರಿನ ಚಾಲಕ ತನ್ನ ವೇಗವನ್ನು ಹೆಚ್ಚಿ, ಖಮಾಸ್​ ಚೌಧರಿ ಹಾಗೂ ಜವಾನನೊಬ್ಬನಿಗೆ ಡಿಕ್ಕಿ ಹೊಡೆದಿದ್ದಾನೆ. ಚೌಧರಿ ಕಲ್ಲೊಂದರ ಮೇಲೆ ಬಿದ್ದಿದ್ದು, ಕಲ್ಲು ತಲೆಗೆ ಬಲವಾಗಿ ತಾಗಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ." ಎಂದು ತಿಳಿಸಿದರು.

ಇದನ್ನೂ ಓದಿ:ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ: 9 ಕಾರುಗಳ ಜಖಂ

ABOUT THE AUTHOR

...view details