ಕರ್ನಾಟಕ

karnataka

ETV Bharat / bharat

ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷದೊಳಗಿನವರಿಗೆ ಶೇ.100ರಷ್ಟು ಕೋವಿಡ್‌ ಲಸಿಕೆ ಪೂರ್ಣ

Lakshadweep: ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷದೊಳಗಿನ ಅಪ್ರಾಪ್ತರಿಗೆ ಶೇ.100 ರಷ್ಟು ಲಸಿಕೆ ನೀಡಿಕೆ ಪೂರ್ಣಗೊಳಿಸಿದೆ.

lakshadweep vaccinates all eligible children in the age group of 15 to 18 years
ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷದೊಳಗಿನವರಿಗೆ ಶೇ.100ರಷ್ಟು ಕೋವಿಡ್‌ ಲಸಿಕೆ ಪೂರ್ಣ

By

Published : Jan 12, 2022, 7:00 AM IST

ನವದೆಹಲಿ: ಲಕ್ಷದ್ವೀಪದಲ್ಲಿ 15 ರಿಂದ 18 ವರ್ಷ ವಯಸ್ಸಿನ ಅರ್ಹ ಮಕ್ಕಳಿಗೆ ಶೇ.100 ರಷ್ಟು ಲಸಿಕೆ ನೀಡಿಕೆಯನ್ನು ಪೂರ್ಣಗೊಳಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಾಧನೆ ಮಾಡಿದ ಮೊದಲ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪವಾಗಿದೆ.

ದ್ವೀಪದಲ್ಲಿ ಎಲ್ಲ 3,492 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಇದಕ್ಕೆ ಸಂಬಂಧ ಎಲ್ಲ ಶಾಲಾ - ಕಾಲೇಜುಗಳು, ಆರೋಗ್ಯ ಕಾರ್ಯಕರ್ತರು ನೆರವಿನಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ, ಕಾರ್ಯದರ್ಶಿ ಎಸ್. ಅಸ್ಗರ್ ಅಲಿ ತಿಳಿಸಿದ್ದಾರೆ.

ಕೋವಿಡ್‌ ನಿಯಂತ್ರಿಸಲು ದೇಶಾದ್ಯಂತ 15-18 ವರ್ಷದೊಳಗಿನವರಿಗೆ ಲಸಿಕೆ ಕಾರ್ಯಕ್ರಮವು ಜ.3 ರಂದು ಪ್ರಾರಂಭವಾಗಿತ್ತು. ಇದರ ನಿಮಿತ್ತ ಲಕ್ಷದ್ವೀಪವು ಒಂದು ವಾರದೊಳಗೆ 3,492 ಮಕ್ಕಳಿಗೆ ಲಸಿಕೆಗಳನ್ನು ವಿತರಿಸಿದೆ. ಹೆಚ್ಚುವರಿಯಾಗಿ, ಐಸಿಎಂಆರ್‌ ನಿಯಮಗಳ ಪ್ರಕಾರ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡಲಾಗುತ್ತಿದೆ.

ಇದಕ್ಕೂ ಮೊದಲು ಲಕ್ಷದ್ವೀಪವು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ 100 ಪ್ರತಿಶತದಷ್ಟು ಲಸಿಕೆಯನ್ನು ವಿತರಿಸಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ರಾಜ್ಯವಾಗಿತ್ತು.

ಇದನ್ನೂ ಓದಿ:ಅಮೆರಿಕದಲ್ಲಿ ಒಂದೇ ದಿನ 13 ಲಕ್ಷಕ್ಕೂ ಹೆಚ್ಚು ಕೋವಿಡ್ ಸೋಂಕಿತರು​ ಪತ್ತೆ, ಹೊಸ ಜಾಗತಿಕ ದಾಖಲೆ

For All Latest Updates

TAGGED:

ABOUT THE AUTHOR

...view details