ಕರ್ನಾಟಕ

karnataka

ETV Bharat / bharat

ಮಳೆ ನೀರಿನಲ್ಲಿ ಮುಳುಗಿದ ಕಾರು: ವೈದ್ಯೆ ಸಾವು - ಮಳೆ ನೀರಿನಲ್ಲಿ ಕಾರು ಸಿಲುಕಿ ವೈದ್ಯೆ ಸಾವು

ಮಳೆ ನೀರನಲ್ಲಿ ಸಿಲುಕಿದ ಕಾರಿನಲ್ಲಿದ್ದ ವೈದ್ಯೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Lady doctor died inside submerged car
Lady doctor died inside submerged car

By

Published : Sep 18, 2021, 1:59 PM IST

ಹೊಸೂರು(ತಮಿಳುನಾಡು):ಮಳೆ ವೈದ್ಯೆಯೊಬ್ಬರನ್ನು ಬಲಿ ಪಡೆದಿದೆ. ಮಳೆ ನೀರಿನಲ್ಲಿ ಕಾರೊಂದು ಮುಳುಗಿದ್ದು, ಕಾರಿನಲ್ಲಿದ್ದ ವೈದ್ಯೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಹೊಸೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಸತ್ಯಾ ಮೃತಪಟ್ಟ ವೈದ್ಯೆಯಾಗಿದ್ದು, ಅವರು ಹೊಸೂರಿನಿಂದ ತನ್ನ ಅತ್ತೆಯೊಂದಿಗೆ ಪುದುಕೊಟ್ಟೈಗೆ ಬರುವಾಗ ಈ ಘಟನೆ ನಡೆದಿದೆ. ಪುದುಕೊಟ್ಟೈ ಸಮೀಪದ ವೆಲ್ಲನೂರ್ ಪ್ರದೇಶದ ಸಬ್​ವೇನಲ್ಲಿ ಬರುವ ವೇಳೆ ಮಳೆ ನೀರಿನಲ್ಲಿ ಕಾರು ಸಿಲುಕಿದೆ.

ಸ್ವಲ್ಪ ಸಮಯದ ವೇಳೆ ನೀರಿನ ಮಟ್ಟ ಹೆಚ್ಚಾಗಿದ್ದು, ಉಸಿರಾಟದ ಸಮಸ್ಯೆಯಿಂದ ಸತ್ಯಾ ಸಾವನ್ನಪ್ಪಿದ್ದಾರೆ. ಆಕೆಯ ಅತ್ತೆಯನ್ನು ರಕ್ಷಣೆ ಮಾಡಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ನಾಲ್ಕೂವರೆ ಲಕ್ಷ ರೂ. ದರೋಡೆ

ABOUT THE AUTHOR

...view details