ಚಂಡೀಗಢ: ಜೂನ್ 4 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಬೇಲಿದ್ದ ಖಾಲಿಸ್ತಾನ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮವು ಸಿಡ್ನಿ ಮೇಸೋನಿಕ್ ಸೆಂಟರ್‌ನಲ್ಲಿ ನಡೆಯಬೇಕಿತ್ತು. ಸ್ಥಳೀಯ ಭಾರತೀಯ ಮೂಲದ ನಿವಾಸಿಗಳು ಈ ಕಾರ್ಯಕ್ರಮವನ್ನು ವಿರೋಧಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಟಿಕೆಟ್ ಬುಕಿಂಗ್ ರದ್ದುಗೊಳಿಸಲಾಗಿದೆ. ಇಂತಹ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇತ್ತೀಚಿನ ಭೇಟಿಯ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಜೊತೆ ಖಲಿಸ್ತಾನಿಗಳ ವಿಚಾರವನ್ನು ಪ್ರಸ್ತಾಪಿಸಿದ್ದರು.
ಕಾರ್ಯಕ್ರಮದ ಟಿಕೇಟ್ ಬುಕಿಂಗ್ ರದ್ದು:ತೀವ್ರ ವಿರೋಧ ವ್ಯಕ್ತವಾದ ಬೆನ್ನಲೆ ಸಿಡ್ನಿ ಮೇಸೋನಿಕ್ ಸೆಂಟರ್ (SMC) ವಿವಾದಾತ್ಮಕ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್‌ನ ಜನಾಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಆಸ್ಟ್ರೇಲಿಯನ್ ಮಾಧ್ಯಮಗಳ ವರದಿಯ ಪ್ರಕಾರ, ಸಿಖ್ ಫಾರ್ ಜಸ್ಟೀಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ಬಹಿರಂಗವಾದಗಿನಿಂದ ನಿರಂತರವಾಗಿ ದೂರುಗಳು ಮತ್ತು ಬೆದರಿಕೆಗಳು ಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಭದ್ರತಾ ಏಜೆನ್ಸಿಗಳ ಸಲಹೆಯ ಮೇರೆಗೆ ಕಾರ್ಯಕ್ರಮದ ಟಿಕೆಟ್ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಮಾಡಿವೆ.
ಇದನ್ನೂ ಓದಿ:ಪಂಜಾಬ್ನ ಪ್ರಾಚೀನ ದೇವಾಲಯದ ಗೋಡೆ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಬರಹ
ಬುಕ್ಕಿಂಗ್ ಸಮಯದಲ್ಲಿ ಈ ಖಲಿಸ್ತಾನ್ ಘಟನೆಯ ವಿವಾದಾತ್ಮಕ ಕಾರ್ಯಕ್ರಮದ ಕುರಿತು ನಮಗೆ ಮಾಹಿತಿ ಇರಲಿಲ್ಲ, ಈ ಕುರಿತ ಹೆಚ್ಚಿನ ಚರ್ಚೆಯ ನಂತರ, ಸಿಡ್ನಿ ಮೇಸೋನಿಕ್ ಸೆಂಟರ್ ಸಮುದಾಯಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ಘಟನೆಯ ಭಾಗವಾಗಲು ನಾವು ಬಯಸುವುದಿಲ್ಲ ಎಂದು ಸಿಡ್ನಿ ಮೆಸೋನಿಕ್ ಸೆಂಟರ್‌ನ ವಕ್ತಾರರು ಸ್ವಷ್ಟಪಡಿಸಿದ್ದಾರೆ.