ಎರ್ನಾಕುಲಂ(ಕೇರಳ):ವ್ಯಕ್ತಿಯೊಬ್ಬ ತ್ಯಾಜ್ಯದ ತೊಟ್ಟಿಯಲ್ಲಿ ಎಸೆದ ತರಕಾರಿಯನ್ನು ಹೆಕ್ಕಿಕೊಳ್ಳುತ್ತಿದ್ದ. ಇದನ್ನು ಕಂಡ ವ್ಯಾಪಾರಿಯೊಬ್ಬ ಇದನ್ನೇಕೆ ಸಂಗ್ರಹಿಸುತ್ತಿರುವೆ ಎಂದು ಕೇಳಿದಾಗ, ಆತ ತಾನು ಕ್ಯಾನ್ಸರ್ ರೋಗಿ ಹಣವಿಲ್ಲದೇ ಬಿಸಾಡಿದ ತರಕಾರಿಯನ್ನೇ ಒಟ್ಟು ಮಾಡಿ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾನೆ. ಇದನ್ನು ಕೇಳಿದ ಆ ವ್ಯಾಪಾರಿ ಇನ್ನು ಮುಂದೆ ಕ್ಯಾನ್ಸರ್ ರೋಗಿಗಳಿಗೆ ತನ್ನ ಅಂಗಡಿಯಲ್ಲಿ 'ಉಚಿತ ತರಕಾರಿ' ಎಂದು ಬೋರ್ಡ್ ಹಾಕಿದ.
ಇದು ಕೇರಳದ ಜೆಫಿ ಕ್ಸೇವಿಯರ್ ಎಂಬ ತರಕಾರಿ ವ್ಯಾಪಾರಿ ತೋರಿದ ಔದಾರ್ಯ. ತಮ್ಮ ಅಂಗಡಿಯ ತ್ಯಾಜ್ಯದ ತೊಟ್ಟಿಯಲ್ಲಿ ಎಸೆದ ತರಕಾರಿಯನ್ನು ಸಂಗ್ರಹಿಸುತ್ತಿದ್ದ ಕ್ಯಾನ್ಸರ್ ವ್ಯಕ್ತಿಯನ್ನು ಪ್ರಶ್ನಿಸಿ ವಿಷಯ ತಿಳಿದುಕೊಂಡಾಗ ಇನ್ನು ಮುಂದೆ ತಾನು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ತರಕಾರಿಯನ್ನು ನೀಡಲು ನಿಶ್ಚಯಿಸಿದರು.
ಅದರಂತೆಯೇ ಅವರು ಫ್ರೀಯಾಗಿ ತರಕಾರಿಯನ್ನು ನೀಡುತ್ತಿದ್ದಾರೆ. ಇದನ್ನು ಅವರು ಕಳೆದ 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರಂತೆ. ಜೆಫಿ ಕ್ಸೇವಿಯರ್ ನಡೆಸುವ ಕಾಲೂರು, ಆಲುವಾ, ಪುಳಿಂಜೋಡು, ಅಂಗಮಾಲಿ, ವೈಟಿಲದ ಅಂಗಡಿಗಳಲ್ಲೂ ಕ್ಯಾನ್ಸರ್ ಪೀಡಿತರಿಗೆ ಉಚಿತ ತರಕಾರಿ ಎಂಬ ಬೋರ್ಡ್ ಹಾಕಲಾಗಿದೆ.