ಕರ್ನಾಟಕ

karnataka

ETV Bharat / bharat

ನನ್ನನ್ನು ಹೋಟೆಲ್​ಗೆ ಆಹ್ವಾನಿಸಿದ್ದರು: ಸಿಪಿಐಎಂ ನಾಯಕರ ವಿರುದ್ಧ ಸ್ವಪ್ನಾ ಸುರೇಶ್ ಲೈಂಗಿಕ ದೌರ್ಜನ್ಯ ಆರೋಪ - swapna suresh accuses top 3 cpim leaders

ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರು ಮೂವರು ಸಿಪಿಐಎಂ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಇಬ್ಬರು ಮಾಜಿ ಸಚಿವರು ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ವಿರುದ್ಧ ಸ್ವಪ್ನಾ ಗಂಭೀರ ಆರೋಪ ಮಾಡಿದ್ದಾರೆ.

Swapna Suresh
ಸ್ವಪ್ನಾ ಸುರೇಶ್

By

Published : Oct 22, 2022, 6:26 PM IST

ತಿರುವನಂತಪುರಂ(ಕೇರಳ): ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಮೂವರು ಸಿಪಿಐಎಂ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.

ದೂರದರ್ಶನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಪ್ನಾ ಅವರು, ಮಾಜಿ ರಾಜ್ಯ ಸಚಿವ ಹಾಗೂ ಶಾಸಕ ಕಡಕಂಪಲ್ಲಿ ಸುರೇಂದ್ರನ್, ಮಾಜಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಹಾಗೂ ಮಾಜಿ ಹಣಕಾಸು ಸಚಿವ ಥಾಮಸ್ ಐಸಾಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುನ್ನಾರ್‌ನಲ್ಲಿರುವ ಸುಂದರವಾದ ಪ್ರವಾಸಿ ಗಿರಿಧಾಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಕಡಕಂಪಲ್ಲಿ ಸುರೇಂದ್ರನ್ ಅವರು ಸಚಿವರಾಗಿ ನಡೆದುಕೊಂಡಿಲ್ಲ. ನನಗೆ ಲೈಂಗಿಕ ಸಂದೇಶಗಳನ್ನು ಕಳುಹಿಸಿದ್ದಾರೆ. ಹೋಟೆಲ್​ಗೆ ಆಹ್ವಾನಿಸಿದ್ದರು. ಆದರೆ, ನನಗೆ ಆಸಕ್ತಿ ಇರಲಿಲ್ಲ. ಈ ವಿಚಾರ ಶಿವಶಂಕರ್​ಗೆ ಸಹ ಗೊತ್ತಿತ್ತು. ಈ ಕುರಿತು ಇಡಿ ಮತ್ತು ಇತರೆ ತನಿಖಾ ಸಂಸ್ಥೆಗಳು ಎಲ್ಲಾ ವಾಟ್ಸ್​ಆ್ಯಪ್​ ಸಂದೇಶಗಳನ್ನು ಸಂಗ್ರಹಿಸಿವೆ. ನಾನು ಹೇಳಿದ್ದರಲ್ಲಿ ತಪ್ಪು, ಮೋಸವಿದ್ದರೆ ಕಡಕಂಪಲ್ಲಿ ಸುರೇಂದ್ರನ್ ಅವರು ಕೇಸು ದಾಖಲಿಸಲಿ. ನಾನು ಯಾರನ್ನೂ ಬ್ಲಾಕ್ ಮೇಲ್ ಮಾಡುವ ಅಗತ್ಯವಿಲ್ಲ. ಅದರಲ್ಲಿ ನನಗೆ ಆಸಕ್ತಿಯೂ ಇಲ್ಲ ಎಂದು ಸ್ವಪ್ನಾ ಸುರೇಶ್​ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ನಾನು ಇನ್ನೆಷ್ಟು ದಿನ ಬದುಕುತ್ತೇನೆ ಎಂಬುದು ಗೊತ್ತಿಲ್ಲ: ಸ್ವಪ್ನಾ ಸುರೇಶ್ ಆತಂಕ

ಪಿ ಶ್ರೀರಾಮಕೃಷ್ಣನ್ ಕೂಡ ಹೀಗೆಯೇ. ನನ್ನನ್ನು ಕಾಲೇಜು ವಿದ್ಯಾರ್ಥಿನಿಯಂತೆ ನಡೆಸಿಕೊಳ್ಳುತ್ತಿದ್ದರು. ಐ ಲವ್ ಯೂ ಎಂಬ ಸಂದೇಶಗಳನ್ನು ನಿರಂತರವಾಗಿ ಕಳುಹಿಸಿ ಮನೆಗೆ ಕರೆಯುತ್ತಿದ್ದರು. ಶ್ರೀರಾಮಕೃಷ್ಣರು ಸ್ನೇಹದ ಭಾಗವಾಗಿದ್ದ ಸಂಬಂಧವನ್ನು ಮತ್ತೊಂದು ಪ್ರಕಾರಕ್ಕೆ ಕೊಂಡೊಯ್ಯಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಕೇರಳ ಅಕ್ರಮ ಚಿನ್ನ ಸಾಗಣೆ ಪ್ರಕರಣ: ಮಾಧ್ಯಮದೆದುರು ಸ್ವಪ್ನಾ ಸುರೇಶ್‌ ಕಣ್ಣೀರು

ಇನ್ನು, ಸ್ವಪ್ನಾ ಸುರೇಶ್ ಅವರು ಸಾರ್ವಜನಿಕವಾಗಿ ಮೂವರು ನಾಯಕರನ್ನು ಹೆಸರಿಸಿ ಆರೋಪ ಮಾಡಿ 12 ಗಂಟೆಗಳು ಕಳೆದಿವೆ. ಆದರೆ, ಆಡಳಿತಾರೂಢ ಸಿಪಿಐಎಂ ಮಾತ್ರ ಈ ಕುರಿತು ಮೌನವಹಿಸಿದೆ ಎನ್ನಲಾಗಿದೆ.

ಇದನ್ನೂ ಓದಿ:ಜೀವ ಬೆದರಿಕೆ ಆರೋಪ.. ರಕ್ಷಣೆ ಕೋರಿ ಕೋರ್ಟ್ ಮೊರೆ ಹೋದ ಸ್ವಪ್ನಾ

ABOUT THE AUTHOR

...view details