ಎರ್ನಾಕುಲಂ (ಕೇರಳ): ಚಿಕ್ಕ ವಯಸ್ಸಿನಲ್ಲಿ ಆಟಿಕೆ ಕೊಳ್ಳಲಾಗದ ವ್ಯಕ್ತಿಯೋರ್ವ, ಬೇರೆ ಮಕ್ಕಳ ಆಟಿಕೆ ನೋಡಿ ನನಗೂ ಆಟಿಕೆ ಬೇಕು ಎಂದು ಬಯಸಿದ್ದರು. ಆದರೆ, ಬೆಳೆದು ದೊಡ್ಡವನಾದ ಬಳಿಕ ಆಟಿಕೆ ದುರಸ್ಥಿ ಮಾಡುತ್ತಾ ಇದೀಗ ಮನೆಯಲೆಲ್ಲಾ ಆಟಿಕೆಗಳನ್ನೇ ತುಂಬಿಕೊಂಡಿದ್ದಾರೆ.
ಇಲ್ಲಿನ ಕಾಲೂರ್ ಮೆಟ್ರೋ ಸ್ಟೇಷನ್ ಬಳಿಯ ವಿಜಯನ್ ಎಂಬುವರ ಮನೆ ಈಗ ಆಟಿಕೆಗಳ ಸಂಗ್ರಹಾಲಯದಂತೆ ಬದಲಾಗಿದೆ. ಚಿಕ್ಕಮಕ್ಕಳ ಆಟಿಕೆಗಳಿಂದ ಹಿಡಿದು ಎಲ್ಲಾ ಆಟಿಕೆಗಳು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ.
ಆದರೆ, ಇವರು ಆಟಿಕೆಗಳನ್ನ ಸಂಗ್ರಹಿಸೋದರ ಜತೆಗೆ ದುರಸ್ಥಿಗೊಂಡ ಆಟಿಕೆಗಳ ರಿಪೇರಿಯನ್ನೂ ಮಾಡಿಕೊಡುತ್ತಾರೆ. ಹೀಗಾಗಿ, ದೂರದ ಊರಿನಿಂದಲೂ ಇವರ ಬಳಿ ಹಾಳಾದ ಆಟಿಕೆಗಳನ್ನ ಹೊತ್ತು ಜನ ಬರುತ್ತಾರೆ.
ಮಕ್ಕಳ ಆಟಿಕೆ ಸಂಗ್ರಹಕ್ಕೆ ನಿಂತ ಕೇರಳ ವ್ಯಕ್ತಿ.. ದಿನಗೂಲಿ ನೌಕರನಾಗಿದ್ದರೂ ಸಹ ಆಟಿಕೆ ಸಂಗ್ರಹದ ಹವ್ಯಾಸ ಮಾತ್ರ ಬಿಟ್ಟಿಲ್ಲ. ಇಡುಕ್ಕಿಯಿಂದ ಕೊಚ್ಚಿಗೆ ಬಂದರೂ ಅವರ ದುಡಿಮೆಯ ಸಿಂಹಪಾಲನ್ನು ಆಟಿಕೆ ಕೊಳ್ಳಲೆಂದು ಮೀಸಲಿಡುತ್ತಾರೆ.
ಬದುಕು ಬದಲಿಸಿದ ಹೆಲಿಕಾಪ್ಟರ್ :12 ವರ್ಷದ ಹಿಂದೆ ಆಟಿಕೆಯ ಹೆಲಿಕಾಪ್ಟರ್ವೊಂದನ್ನು ಇವರು ಖರೀದಿಸಿದ್ದರು. ಇದು ಅವರ ಜೀವನವನ್ನೇ ಬದಲಾಯಿಸಿತು. ದಿನಗೂಲಿಯಲ್ಲಿ ಉಳಿತಾಯ ಮಾಡಿ 3 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದ ಹೆಲಿಕಾಪ್ಟರ್ ಕೆಲವೇ ದಿನದಲ್ಲಿ ಹಾಳಾಗಿತ್ತು.
ಇದನ್ನು ಖರೀದಿಸಿದ ಅಂಗಡಿಯವನ ಬಳಿ ಹೋದ್ರೆ ಆತ ಬದಲಾಯಿಸಲು ಸಾಧ್ಯವಿಲ್ಲ, ಗ್ಯಾರಂಟಿ ಸಹ ಇಲ್ಲ ಎಂದು ಹೇಳಿ ಕಳುಹಿಸಿದ್ದ. ಇದಾದ ಬಳಿಕ ಸ್ವತಃ ವಿಜಯನ್ ಹೆಲಿಕಾಪ್ಟರ್ ರಿಪೇರಿ ಮಾಡಲು ಮುಂದಾಗಿ, ಅದರಲ್ಲಿ ಯಶಸ್ವಿಯೂ ಆದರು.
ಬಳಿಕ ಈ ಹೆಲಿಕಾಪ್ಟರ್‌ನ ಮೂಲ ಬೆಲೆಗಿಂತ 200 ರೂ. ಹೆಚ್ಚು ಮಾಡಿ ಸ್ನೇಹಿತರೊಬ್ಬರಿಗೆ ಮಾರಾಟ ಮಾಡಿದ್ದರು. ಈ ಎಲ್ಲಾ ವಿಚಾರಗಳು ಹೆಲಿಕಾಪ್ಟರ್ ಮಾರಿದ್ದ ಅಂಗಡಿಯವನಿಗೆ ತಿಳಿಯಿತು. ಬಳಿಕ ಆತ ಸಹ ಇನ್ನೆರಡು ಹೆಲಿಕಾಪ್ಟರ್ ತಂದು ಇದನ್ನೂ ರಿಪೇರಿ ಮಾಡಿಕೊಡುವಂತೆ ಕೇಳಿಕೊಂಡಿದ್ದ.
ಇದಾದ ಬಳಿ ಆಟಿಕೆಗಳ ರಿಪೇರಿ ಮುಂದುವರಿಸಿ. ಯಾವುದೇ ಆಟಿಕೆ ಹಾಳಾಗಿದ್ದರು ವಿಜಯನ್ ಕೈ ತಲುಪಿದ್ರೆ ಕ್ಷಣಾರ್ಧದಲ್ಲಿ ಅದನ್ನು ಸರಿಪಡಿಸುತ್ತಾರೆ.
ಓದಿ:ಧರಣಿ ಕುಳಿತ ಪ್ರಧಾನಿ ಮೋದಿ ಕಿರಿಯ ಸಹೋದರ: ಕಾರಣ!?