ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ತೌಕ್ತೆ ಚಂಡಮಾರುತ.. ಭಾರಿ ಮಳೆ, ಮನೆಗಳಿಗೆ ನುಗ್ಗಿದ ನೀರು - ಕೇರಳದಲ್ಲಿ ಮಳೆ

ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಕೇರಳದಲ್ಲಿ ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಕೆಲವೊಂದು ಪ್ರದೇಶಗಳಲ್ಲಿ ಈಗಾಗಲೇ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

Kerala Rain
Kerala Rain

By

Published : May 14, 2021, 7:39 PM IST

ತಿರುವನಂತರಪುರಂ:ದೇವರ ನಾಡು ಕೇರಳದಲ್ಲಿ ಇಂದು ಬೆಳಗ್ಗೆಯಿಂದಲೇ ವರುಣಾರ್ಭಟ ಜೋರಾಗಿದ್ದು, ಈಗಾಗಲೇ ಕೆಲವೊಂದು ಮನೆಗಳಿಗೆ ನೀರು ನುಗ್ಗಿ ಹಾನಿಯನ್ನುಂಟು ಮಾಡಿದೆ.

ವರ್ಷದ ಮೊದಲ ಚಂಡಮಾರುತ ತೌಕ್ತೆ ಕೇರಳಕ್ಕೆ ಲಗ್ಗೆ ಹಾಕಲಿದೆ ಎಂಬ ಮಾಹಿತಿ ಈಗಾಗಲೇ ಹವಾಮಾನ ಇಲಾಖೆಯಿಂದ ಲಭ್ಯವಾಗಿದ್ದು, ಇದರ ಬೆನ್ನಲ್ಲೇ ಭಾರಿ ಪ್ರಮಾಣದ ಮಳೆ ಸುರಿಯಲು ಆರಂಭಗೊಂಡಿದೆ. ಪರಿಣಾಮ ಕೊಚ್ಚಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸಾಮಾನ್ಯ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಕೇರಳದಲ್ಲಿ ಮಳೆ ಅಬ್ಬರ

ಚಂಡಮಾರುತದ ಕಾರಣ ಕೇರಳದ ತಿರುವನಂತಪುರಂ, ಕಾಸರಗೋಡು, ಕಣ್ಣೂರು, ವೈನಾಡು, ಮಲಪ್ಪುರಂ, ಕೊಲ್ಲಂ ಸೇರಿದಂತೆ 8 ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆ ಕೇರಳಕ್ಕೆ ತೌಕ್ತೆ ಪ್ರವೇಶ ಪಡೆದುಕೊಳ್ಳಲಿದೆ ಎನ್ನಲಾಗಿದ್ದು, ಮೇ 16ರ ನಂತರ ಕರ್ನಾಟಕದಲ್ಲೂ ಇದರ ಅಬ್ಬರ ಶುರುವಾಗಲಿದೆ.

ಇದನ್ನೂ ಓದಿ: ತೌಕ್ತೆ​​ ಚಂಡಮಾರುತದಿಂದ ಭಾರಿ ಮಳೆಯಾಗುವ ಸಾಧ್ಯತೆ: ಕೇರಳದಲ್ಲಿ ಕಟ್ಟೆಚ್ಚರ

ಪ್ರಮುಖವಾಗಿ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದ ಕೆಲವೊಂದು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಆರೆಂಜ್​ ಅಲರ್ಟ್ ಘೋಷಣೆಯಾಗಿದೆ.

ABOUT THE AUTHOR

...view details