ಕರ್ನಾಟಕ

karnataka

ETV Bharat / bharat

ಕೋವಿಡ್​​ನಿಂದ ಅನಾಥವಾಗಿರುವ 87 ಮಕ್ಕಳಿಗೆ 3.2 ಕೋಟಿ ನೆರವು!

ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೇರಳ ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇದಕ್ಕಾಗಿ ಪ್ರಸ್ತುತ 87 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಕೋವಿಡ್​​ನಿಂದ ಅನಾಥವಾಗಿರುವ 87 ಮಕ್ಕಳಿಗೆ ಕೇರಳ ಸರ್ಕಾರದಿಂದ  3.2 ಕೋಟಿ
ಕೋವಿಡ್​​ನಿಂದ ಅನಾಥವಾಗಿರುವ 87 ಮಕ್ಕಳಿಗೆ ಕೇರಳ ಸರ್ಕಾರದಿಂದ 3.2 ಕೋಟಿ

By

Published : Aug 20, 2021, 10:03 PM IST

ತಿರುವನಂತಪುರಂ: ಕೋವಿಡ್ ಸಾಂಕ್ರಾಮಿಕ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಆರ್ಥಿಕ ನೆರವು ನೀಡಲು ರೂ 3.2 ಕೋಟಿ ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ನಿಶ್ಚಿತ ಠೇವಣಿ 3 ಲಕ್ಷ ರೂ. ಮತ್ತು ಮಗುವಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 2000 ರೂ. ನೀಡಲು ಅನುಮತಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಮೊತ್ತವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಈ ಮಕ್ಕಳ ಪದವಿ ಹಂತದವರೆಗಿನ ಶಿಕ್ಷಣ ವೆಚ್ಚವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ಭರಿಸಲಾಗುತ್ತದೆ. ಈ ಯೋಜನೆಗೆ ಪ್ರಸ್ತುತ 87 ಮಕ್ಕಳು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಶಿಶುಪಾಲನಾ ಘಟಕಗಳು ಐಸಿಡಿಎಸ್ ಸಿಬ್ಬಂದಿ ಫಲಾನುಭವಿಗಳ ಮನೆಗೆ ಭೇಟಿ ನೀಡಿದ ನಂತರ ಮಕ್ಕಳ ಮಾಹಿತಿ ಸಂಗ್ರಹಿಸಿ ಅವರ ಸ್ಥಿತಿಯನ್ನು ಮೌಲ್ಯಮಾಪನ ಮಾಡಿದ್ದಾರೆ. ನಂತರ, ಮಕ್ಕಳ ರಕ್ಷಣಾ ಸಮಿತಿಗೆ ವರದಿಯನ್ನು ಕಳುಹಿಸಲಾಯಿತು. ಹೀಗಾಗಿ ಮಕ್ಕಳ ಕಲ್ಯಾಣಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ವಿವರಿಸಿದರು.

ABOUT THE AUTHOR

...view details