ಕರ್ನಾಟಕ

karnataka

ETV Bharat / bharat

ಜಯಲಲಿತಾ ಬಯೋಪಿಕ್ ತಲೈವಿ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ - ಕಂಗನಾ ರಣಾವತ್​ ಸಿನಿಮಾ

ಈ ಮೋಷನ್ ಪೋಸ್ಟರ್​ನಲ್ಲಿ ರಾಜಕೀಯದ ಬಗ್ಗೆ ಹೇಳಲಾಗಿದೆ. ಕಂಗನಾ ರಣಾವತ್ ತಮ್ಮ ಕೈಯಲ್ಲಿ ಗೆಲುವಿನ ಸಂಕೇತ ತೋರಿದ್ದಾರೆ. ಈ ಸಿನಿಮಾದ ಬಿಡುಗಡೆಯ ಘೋಷಣೆ ಜಯಲಲಿತಾ ಮತ್ತು ಕಂಗನಾ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಟ್ಟು ಹಾಕಿದೆ..

Kangana Ranaut's 'Thalaivi' to hit theatres on April 23
ಜಯಲಲಿತಾ ಬಯೋಪಿಕ್ ತಲೈವಿಗೆ ಬಿಡುಗಡೆಗೆ ದಿನಾಂಕ ಫಿಕ್ಸ್

By

Published : Feb 26, 2021, 10:10 AM IST

ನವದೆಹಲಿ :ತಮಿಳುನಾಡು ಜನರ ಆರಾಧ್ಯದೈವ, ಅಚ್ಚುಮೆಚ್ಚಿನ ರಾಜಕಾರಣಿ, ಮಾಜಿ ಸಿಎಂ ದಿ. ಜಯಲಲಿತಾ ಅವರ ಬಯೋಪಿಕ್ ತಲೈವಿ ಚಿತ್ರ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಈ ವರ್ಷ ಏಪ್ರಿಲ್ 23ರಂದು ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ಮೋಷನ್ ಪೋಸ್ಟರ್ ಮೂಲಕ ಚಿತ್ರ ಬಿಡುಗಡೆಯ ದಿನಾಂಕ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಕಂಗನಾ ರಣಾವತ್ ತಮ್ಮ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಮೋಷನ್ ಪೋಸ್ಟರ್​ನಲ್ಲಿ ರಾಜಕೀಯದ ಬಗ್ಗೆ ಹೇಳಲಾಗಿದೆ. ಕಂಗನಾ ರಣಾವತ್ ತಮ್ಮ ಕೈಯಲ್ಲಿ ಗೆಲುವಿನ ಸಂಕೇತ ತೋರಿದ್ದಾರೆ. ಈ ಸಿನಿಮಾದ ಬಿಡುಗಡೆಯ ಘೋಷಣೆ ಜಯಲಲಿತಾ ಮತ್ತು ಕಂಗನಾ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಟ್ಟು ಹಾಕಿದೆ.

ಇದನ್ನೂ ಓದಿ:ಸಿಎಂ ಅರವಿಂದ್ ಕೇಜ್ರಿವಾಲ್‌ರಿಗೆ ನೀಡಿದ ಭದ್ರತೆ ಕಡಿತ ಇಲ್ಲ : ದೆಹಲಿ ಪೊಲೀಸರ ಸ್ಪಷ್ಟನೆ

ಎ.ಎಲ್.ವಿಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಮತ್ತು ಮಣಿಕರ್ಣಿಕಾ ಸಿನಿಮಾಗಳಿಗೆ ಚಿತ್ರಕಥೆ ಬರೆದಿರುವ ಕೆವಿ ವಿಜಯೇಂದ್ರ ಪ್ರಸಾದ್ ಮತ್ತು ದ ಡರ್ಟಿ ಪಿಕ್ಚರ್ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಸಿನಿಮಾಗೆ ಚಿತ್ರಕಥೆ ಬರೆದಿರುವ ರಜತ್ ಅರೋರಾ ತಲೈವಿ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ.

ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಈ ಸಿನಿಮಾದ ನಿರ್ಮಾಣಕಾರರಾಗಿದ್ದಾರೆ. ವಿಬ್ರಿ ಮೀಡಿಯಾ, ಕರ್ಮಾ ಮೀಡಿಯಾ, ಗೋಥಿಕ್ ಎಂಟರ್​ಟೈನ್​ಮೆಂಟ್ ಅಂಡ್ ಸ್ಪ್ರಿಂಟ್ ಫಿಲ್ಮ್​ ಬ್ಯಾನರ್​ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ABOUT THE AUTHOR

...view details