ಕರ್ನಾಟಕ

karnataka

By

Published : Nov 24, 2022, 6:47 PM IST

ETV Bharat / bharat

ನ್ಯಾಯಾಧೀಶರು ಕಾರ್ಯ ಒತ್ತಡ ಅನುಭವಿಸುತ್ತಿದ್ಧಾರೆ: ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್​

ಹೆಚ್ಚಿತ್ತಿರುವ ಪ್ರಕರಣ ಪಟ್ಟಿಯಿಂದ ನ್ಯಾಯಾಧೀಶರು ಕೆಲಸದ ಹೊರೆ ಮತ್ತು ಕೆಲಸದ ಒತ್ತಡ ಅನುಭವಿಸುತ್ತಿದ್ಧಾರೆ ಎಂದು ಉಚ್ಛನ್ಯಾಯಾಲದ ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

judges working under strain
ನ್ಯಾಯಧೀಶರು ಕಾರ್ಯಒತ್ತಡವನ್ನು ಅನುಭವಿಸುತ್ತಿದ್ಧಾರೆ

ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಗಾಧವಾದ ಕೆಲಸದ ಹೊರೆ ಎದುರಿಸುತ್ತಿದ್ದಾರೆ ಮತ್ತು ಪ್ರಕರಣಗಳ ಕಾರ್ಯ ಪಟ್ಟಿಯಿಂದ ತೀವ್ರವಾದ ಕಾರ್ಯ ಒತ್ತಡದಲ್ಲಿದ್ದಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್​ ಗುರುವಾರ ಹೇಳಿದ್ದಾರೆ.

ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು ತಮ್ಮ ಪ್ರಕರಣಗಳ ತುರ್ತು ಪಟ್ಟಿಗಾಗಿ ವಕೀಲರ ಪ್ರಸ್ತಾಪಗಳನ್ನು ಆಲಿಸುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನ್ಯಾಯದೀಶರು ಹೆಚ್ಚು ಕಾರ್ಯದ ಒತ್ತಡ ಅನುಭವಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದರು.

ಮುಂದಿನ ವಾರ 13 ಪೀಠಗಳ ಮುಂದೆ 525 ವಿಷಯಗಳನ್ನು ಪಟ್ಟಿ ಮಾಡಬೇಕಾಗಿದೆ. ಒತ್ತಡವು ಅಗಾಧವಾಗಿದೆ, ನ್ಯಾಯಾಧೀಶರು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ ಪೀಠದ ಮುಂದೆ ಸುಮಾರು 45 ರಿಂದ 50 ಪ್ರಕರಣಗಳಿವೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.

ವಿಶೇಷ ಪೀಠಗಳ ರಚನೆ: ಪ್ರಕರಣಗಳ ಪಟ್ಟಿ ಸುವ್ಯವಸ್ಥಿತಗೊಳಿಸಲು ನೋಂದಣಿಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿರ್ದೇಶನಗಳನ್ನು ನೀಡಿದ್ದಾರೆ. ತೆರಿಗೆ ವಿಷಯಗಳು, ಅಪಘಾತಗಳ ಪ್ರಕರಣ, ಕ್ರಿಮಿನಲ್​ ಮೇಲ್ಮನವಿಗಳು ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಮೇಲ್ಮನವಿಗಳನ್ನು ಮುಂದಿನ ವಾರದಿಂದ ವಿಚಾರಣೆ ಮಾಡಲು ವಿಶೇಷ ಪೀಠಗಳನ್ನು ರಚಿಸಲಾಗಿದೆ. ಕೆಲಸದ ಒತ್ತಡ ಕಡಿಮೆ ಮಾಡಲು ಪ್ರಕರಣಗಳನ್ನು ಪಟ್ಟಿ ಮಾಡಲು ತಂತ್ರಜ್ಞಾನ ಬಳಸುವ ಬಗ್ಗೆಯೂ ಉಚ್ಛನ್ಯಾಯಲವು ಯೋಜಿಸಿದೆ.

ಇದನ್ನೂ ಓದಿ:ಮೋರ್ಬಿ ದುರಂತ: ಗುಜರಾತ್​​ನ ಎಲ್ಲ ಸೇತುವೆಗಳ ಸಮೀಕ್ಷೆಗೆ ಹೈಕೋರ್ಟ್ ಆದೇಶ

ABOUT THE AUTHOR

...view details