ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿ: ಜೆಎನ್‌ಯು ಉಪಕುಲಪತಿ ಶಾಂತಿಶ್ರೀ - ಲಿಂಗ ಸಮಾನತೆಯ ನ್ಯಾಯಕ್ಕೆ ಗೌರವ

ಅಂಬೇಡ್ಕರ್‌ ಕೂಡ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಒಲವು ತೋರಿದ್ದರು ಎಂದು ಹೇಳಿದ್ದಾರೆ ಶಾಂತಿಶ್ರೀ ಧೂಳಿಪುಡಿ.

JNU Vice-Chancellor Shantisree
ಜೆಎನ್‌ಯು ಉಪಕುಲಪತಿ ಶಾಂತಿಶ್ರೀ

By

Published : Aug 23, 2022, 1:15 PM IST

Updated : Aug 23, 2022, 2:13 PM IST

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದು ಎಂದರೆ ದೇಶದಲ್ಲಿ ಲಿಂಗ ಸಮಾನತೆಯ ನ್ಯಾಯಕ್ಕೆ ಗೌರವ ಸಲ್ಲಿಸಿದಂತೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಹೇಳಿದ್ದಾರೆ.

ಇಲ್ಲಿನ ಅಂಬೇಡ್ಕರ್‌ ಇಂಟರ್‌ನ್ಯಾಷನಲ್‌ ಸೆಂಟರ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಮೊದಲ ಕಾನೂನು ಸಚಿವ ಭೀಮರಾವ್‌ ಅಂಬೇಡ್ಕರ್‌ ಕೂಡ ಯುಸಿಸಿ ಜಾರಿಗೆ ತರಲು ಒಲವು ತೋರಿದ್ದರು. ಆಗ ಲಿಂಗ ಸಮಾನತೆ, ಏಕರೂಪ ನಾಗರಿಕ ಸಂಹಿತೆ ಡಿಕೋಡಿಂಗ್ ವಿಷಯದ ಕುರಿತು ಚರ್ಚೆ ನಡೆದಿತ್ತು ಎಂದು ಅವರು ತಿಳಿಸಿದರು.

ಯುಸಿಸಿಯನ್ನು ಈಗಾಗಲೇ ಗೋವಾದಲ್ಲಿ ಅಳವಡಿಸಲಾಗಿದೆ ಮತ್ತು ಇದು ಪೋರ್ಚುಗೀಸ್ ಕಾಲದಿಂದಲೂ ಇದೆ. ಸಾಮಾಜಿಕ ಪ್ರಜಾಪ್ರಭುತ್ವದ ಅನುಪಸ್ಥಿತಿಯಲ್ಲಿ, ರಾಜಕೀಯ ಪ್ರಜಾಪ್ರಭುತ್ವವು ದೂರದ ಕನಸಾಗಿ ಉಳಿದಿದೆ ಎಂದು ಪಂಡಿತ್ ಅಭಿಪ್ರಾಯಪಟ್ಟರು.

ಇವತ್ತಿಗೂ ಕೂಡ 54 ವಿಶ್ವವಿದ್ಯಾನಿಲಯಗಳಲ್ಲಿ ಕೇವಲ ಆರು ಮಹಿಳಾ ಉಪಕುಲಪತಿಗಳಿದ್ದಾರೆ ಎಂದು ಪಂಡಿತ್ ಹೇಳಿದರು.

Last Updated : Aug 23, 2022, 2:13 PM IST

ABOUT THE AUTHOR

...view details