ನವದೆಹಲಿ: ಸ್ಟಾಕ್ ಮಾರುಕಟ್ಟೆಯ ಅನುಭವಿ ರಾಕೇಶ್ ಜುಂಜುನ್ವಾಲಾ ಭಾನುವಾರ ಬೆಳಗ್ಗೆ ನಿಧನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಭಾರತದ ವಾರೆನ್ ಬಫೆಟ್ ಎಂದು ಕರೆಯಲ್ಪಡುವ ಜುಂಜುನ್ವಾಲಾ ಅವರು 5.8 ಬಿಲಿಯನ್ ಡಾಲರ್ (ರೂ. 46,000 ಕೋಟಿ) 'ನಿವ್ವಳ ಮೌಲ್ಯ' ಹೊಂದಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು.
ಆದರೆ ಅವರು ನಿಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜುಂಜುನ್ವಾಲಾ ಅವರು ಉತ್ಸಾಹಭರಿತವಾಗಿ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ.
ಹೌದು, ವಿಡಿಯೋದಲ್ಲಿ ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಅವರು ವ್ಹೀಲ್ಚೇರ್ ಮೇಲೆ ಕುಳಿತು ನೀಲಿ ಕಣ್ಣಿನ ಚೆಲುವೆ ಐಶ್ವರ್ಯಾ ರೈ ಅಭಿನಯದ ಕಜ್ರಾರೆ - ಕಜ್ರಾರೆ ಜನಪ್ರಿಯ ಬಾಲಿವುಡ್ ಹಾಡಿಗೆ ಸಖತ್ ಡ್ಯಾನ್ಸ್ ಮಾಡುತ್ತಿರುವುದು ಕಾಣಬಹುದಾಗಿದೆ. ಈ ವಿಡಿಯೋವನ್ನು ಹೂಡಿಕೆದಾರ ಕೇಶವ್ ಅರೋರಾ ಮತ್ತು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರ ಟ್ವಿಟರ್ ಹ್ಯಾಂಡಲ್ @CommerceGuruu ನಿಂದ ಪೋಸ್ಟ್ ಮಾಡಿದ್ದಾರೆ.
ಬಳಿಕ ಈ ದಿನವನ್ನು ನಾನು ದುಃಖದ ದಿನ ಎಂದು ನೆನಪಿಸಿಕೊಳ್ಳಲು ಬಯಸುವುದಿಲ್ಲ ಎಂದು ಕೇಶವ್ ಅರೋರಾ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ. ಹೌದು, RJ ನಿಧನರಾದರು. ಆದರೆ, ಈ ಕ್ಲಿಪ್ ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಇದು ಅವರು ಎಷ್ಟು ಸಂತೋಷವಾಗಿದ್ದರು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಓದಿ:5 ಸಾವಿರ ರೂ.ಯಿಂದ ಸಾವಿರಾರು ಕೋಟಿಯ ಒಡೆಯನಾದ ರಾಕೇಶ್ ಜುಂಜುನ್ವಾಲಾ ರೋಚಕ ಜರ್ನಿ