ರಾಮಗಢ(ಜಾರ್ಖಂಡ್):22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಕೈ-ಕಾಲು ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಜಾರಿಬಾಗ್ ಪೊಲೀಸರು ತನಿಖೆಗೋಸ್ಕರ ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ.
ಡ್ಯಾಂನಲ್ಲಿ 22 ವರ್ಷದ ವಿದ್ಯಾರ್ಥಿನಿ ಮೃತದೇಹ ಪತ್ತೆ... ಅತ್ಯಾಚಾರವೆಸಗಿ ಕೊಲೆ ಶಂಕೆ!
ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿಯೊಬ್ಬಳ ಮೃತದೇಹ ಅಣೆಕಟ್ಟೆಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಜಾರ್ಜಂಡ್ನ ರಾಮಗಢ ಜಿಲ್ಲೆಯ ಪತ್ರಾತು ಅಣೆಕಟ್ಟೆಯಲ್ಲಿ ಮಂಗಳವಾರ ಸ್ಥಳೀಯರು ವಿದ್ಯಾರ್ಥಿನಿಯ ಮೃತದೇಹ ಹೊರತೆಗೆದಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಸಾಧ್ಯತೆ ಸೇರಿದಂತೆ ಎಲ್ಲಾ ದೃಷ್ಟಿಯಿಂದ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ವಿದ್ಯಾರ್ಥಿನಿ ಹಜಾರಿಬಾಗ್ ಮೆಡಿಕಲ್ ಕಾಲೇಜ್ನಲ್ಲಿ ವ್ಯಾಸಂಗ ಮಾಡ್ತಿದ್ದಳು ಎಂದು ತಿಳಿದು ಬಂದಿದೆ.
ಪತ್ರಾತು ಅಣೆಕಟ್ಟು ಪ್ರವಾಸಿ ತಾಣವಾಗಿರುವ ಕಾರಣ ವಿದ್ಯಾರ್ಥಿನಿ ತನ್ನ ಸ್ನೇಹಿತರೊಂದಿಗೆ ಇದರ ಪಕ್ಕದಲ್ಲಿರುವ ರೆಸಾರ್ಟ್ಗೆ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎ.ವಿ.ಹೋಂಕರ್ ಶಂಕೆ ವ್ಯಕ್ತಪಡಿಸಿದ್ದಾರೆ. ಅವರ ಕಾಲು ಹಾಗೂ ಕೈ ಹಗ್ಗಗಳಿಂದ ಕಟ್ಟಿ ಅಣೆಕಟ್ಟೆಗೆ ಎಸೆಯಲಾಗಿದ್ದು, ಅಲ್ಲಿ ಒಂದು ಚೀಲವೂ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.