ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ನಿಯಮ ಉಲ್ಲಂಘನೆ: ಮುಖಕ್ಕೆ ಆರತಿ ಎತ್ತಿ ಬುದ್ಧಿ ಹೇಳಿದ ಪೊಲೀಸರು - ಝಲವಾರ್​ ಪೊಲೀಸರು

ಕೊರೊನಾ ಲಾಕ್​ಡೌನ್​ ನಿಯಮ ಮೀರಿ ಹೊರಗೆ ಸುತ್ತುತ್ತಿದ್ದವರಿಗೆ ಪೊಲೀಸರು ತಿಲಕ ಇಟ್ಟು ಆರತಿ ಬೆಳಗಿ ಬುದ್ದಿ ಮಾತು ಹೇಳಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

jhalawar-police-perform-aarti-to-shame-lockdown-violaters
ಮುಖಕ್ಕೆ ಆರತಿ ಎತ್ತಿ ಬುದ್ದಿ ಹೇಳಿದ ಪೊಲೀಸರು

By

Published : May 19, 2021, 8:12 PM IST

ರಾಜಸ್ಥಾನ:ಕೋವಿಡ್ ಲಾಕ್‌ಡೌನ್ ನಿಯಮ ಮೀರಿದವರಿಗೆ ತಿಲಕ ಇಟ್ಟು ಆರತಿ ಬೆಳಗಿ ಹೊಸ ರೀತಿಯಲ್ಲಿ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.

ಮುಖಕ್ಕೆ ಆರತಿ ಎತ್ತಿ ಬುದ್ದಿ ಹೇಳಿದ ಪೊಲೀಸರು

ಝಲವಾರ್​ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲವರು ಮನೆಯಿಂದ ಹೊರಬಂದು ಕೋವಿಡ್​ ನಿಯಮ ಉಲ್ಲಂಘಿಸುತ್ತಿದ್ದಾರೆ. ಲಾಠಿ ಬೀಸುವುದಕ್ಕಿಂತ ಈ ರೀತಿ ಮಾಡಿದ್ರೆ ಬುದ್ಧಿ ಕಲಿಯಬಹುದು ಎಂದು ಪೊಲೀಸರು ಹೊಸ ತಂತ್ರದ ಮೊರೆ ಹೋಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಬಲ್ವೀರ್ ಸಿಂಗ್ ಕೋವಿಡ್ ಬಗ್ಗೆ ಅರಿವು ಮೂಡಿಸಲು ನಾವೆಲ್ಲ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಜನ ಸಹ ಇದನ್ನರಿತು ನಿಯಮ ಪಾಲಿಸಬೇಕು ಎಂದಿದ್ದಾರೆ.

ಓದಿ:ರಾಜ್ಯದಲ್ಲಿಂದು 34,281 ಮಂದಿಗೆ ವೈರಸ್​ ದೃಢ: 468 ಸೋಂಕಿತರು ಬಲಿ

ABOUT THE AUTHOR

...view details