ನವದೆಹಲಿ: ಜೆಇಇ ಮೈನ್ಸ್ನ ಎರಡನೇ ಹಂತದ ಪರೀಕ್ಷೆಯನ್ನು ಮುಂದೂಡಲಾಗಿದೆ. ಜುಲೈ 21 ರ ಬದಲಿಗೆ ಜುಲೈ 25 ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ಣಾಯಕ ಪರೀಕ್ಷೆಯನ್ನು ಮುಂದೂಡಲು ಎನ್ಟಿಎ ಯಾವುದೇ ಕಾರಣವನ್ನು ನೀಡಿಲ್ಲ.
ಭಾರತದ ಹೊರಗಿನ 17 ನಗರಗಳು ಸೇರಿದಂತೆ ಸುಮಾರು 500 ನಗರಗಳಲ್ಲಿನ ವಿವಿಧ ಕೇಂದ್ರಗಳಲ್ಲಿ 6.29 ಲಕ್ಷ ಅಭ್ಯರ್ಥಿಗಳಿಗೆ ಜುಲೈ 25 ರಿಂದ ಜೆಇಇ-ಮೈನ್ಸ್ನ ಎರಡನೇ ಹಂತದ ಪರೀಕ್ಷೆ ಪ್ರಾರಂಭವಾಗಲಿದೆ. ಪ್ರವೇಶ ಪತ್ರವನ್ನು ಗುರುವಾರದಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು NTA ತಿಳಿಸಿದೆ.