ಕರ್ನಾಟಕ

karnataka

ETV Bharat / bharat

ಜಮ್ಮು ಮತ್ತು ಕಾಶ್ಮೀರದ ಬದಲಿಗೆ ದೆಹಲಿಯಲ್ಲಿ ನಡೆಯಲಿದೆ ಜಿ-20 ಸಭೆ

ಜಿ-20 ಶೃಂಗಸಭೆ ಆಯೋಜಿಸುವ ಪಟ್ಟಿಯಲ್ಲಿ ಜಮ್ಮು ಮತ್ತು ಕಾಶ್ಮೀರವಿಲ್ಲ. ಇದನ್ನು ದೆಹಲಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

By

Published : Sep 14, 2022, 4:21 PM IST

ಜಿ20 ಸಭೆ
ಜಿ20 ಸಭೆ

ಶ್ರೀನಗರ: ಭಾರತವು ಈ ವರ್ಷದ ಡಿಸೆಂಬರ್‌ನಲ್ಲಿ ಜಿ 20ಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಅದರ ಸಭೆಗಳು 2023 ರ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ವರ್ಷದ ಜೂನ್​ನಲ್ಲಿ ಎಸ್‌ಕೆಐಸಿಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಶ್ರೀನಗರದಲ್ಲಿ G-20 ಶೃಂಗಸಭೆಯನ್ನು ಆಯೋಜಿಸಲಾಗುವುದು. ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಆಡಳಿತವು ಅದನ್ನು ನಡೆಸಲು ಸಮಿತಿಯನ್ನು ರಚಿಸಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಜಮ್ಮು- ಕಾಶ್ಮೀರ ಪ್ರವಾಸ.. ಐಐಟಿ ಸಮಾವೇಶದಲ್ಲಿ ಭಾಗಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು 2023 ರ ಸೆಪ್ಟಂಬರ್‌ನಲ್ಲಿ ದೆಹಲಿಯಲ್ಲಿ G20 ಸಭೆಗಳನ್ನು ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಯುರೋಪಿಯನ್ ರಾಷ್ಟ್ರಗಳ ಜೊತೆಗೆ ಹತ್ತೊಂಬತ್ತು ದೇಶಗಳನ್ನು ಜಿ20 ಹೊಂದಿದೆ. ಈ ಸಭೆಯ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಜೂನ್‌ನಲ್ಲಿ ಐದು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

ABOUT THE AUTHOR

...view details