ಕರ್ನಾಟಕ

karnataka

ETV Bharat / bharat

ಜಮ್ಮು - ಕಾಶ್ಮೀರದಲ್ಲಿ ಇಬ್ಬರು ಎಲ್​ಇಟಿ ಸಹಚರರ ಬಂಧನ - jammu kashmir terrorists

ಸಿಆರ್​ಪಿಎಫ್ ಮತ್ತು ಭಾರತೀಯ ಸೇನೆ ಹಾಗೂ ಬದ್ಗಾಂ ಪೊಲೀಸರು ಜಮ್ಮು ಕಾಶ್ಮೀರದ ಬದ್ಗಾಂನಲ್ಲಿ ಕಾರ್ಯಾಚರಣೆ ನಡೆಸಿ, ಲಷ್ಕರ್ ಎ ತೋಯ್ಬಾದ ಭಯೋತ್ಪಾದಕ ಸಂಘಟನೆಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

J&K: Two LeT aides arrested in Budgam
ಜಮ್ಮು ಕಾಶ್ಮೀರದಲ್ಲಿ ಇಬ್ಬರು ಎಲ್​ಇಟಿ ಸಹಚರರ ಬಂಧನ

By

Published : Dec 24, 2021, 9:25 PM IST

ಬದ್ಗಾಂ(ಜಮ್ಮು ಕಾಶ್ಮೀರ): ಭದ್ರತಾ ಪಡೆಗಳು ಜಮ್ಮು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ದಾಳಿ ನಡೆಸಿ ಲಷ್ಕರ್ ಎ ತೋಯ್ಬಾದ ಇಬ್ಬರು ಭಯೋತ್ಪಾದಕರ ಸಹಚರರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬದ್ಗಾಂನ ಚಂದೂರ ಪ್ರದೇಶದ ಕರಲಪುರ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಸಿಆರ್​ಪಿಎಫ್ ಮತ್ತು ಭಾರತೀಯ ಸೇನೆ ಹಾಗೂ ಬದ್ಗಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿವೆ. ಅಬ್ದುಲ್ ಮಜೀದ್ ಮಗ್ರಾ ಮಗನಾದ ಇಮ್ರಾನ್ ಮಜೀದ್ ಮತ್ತು ಮುಹಮದ್ ಅಮಿನ್ ರಾಥರ್ ಮಗನಾದ ಅಖೀಬ್ ಅಮಿನ್ ಬಂಧಿತರಾಗಿದ್ದರಾಗಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಇಬ್ಬರೂ, ಎಲ್​ಇಟಿಯ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಒಂದೆಡೆಯಿಂದ ಮತ್ತೊಂದೆಡೆ ತೆರಳಲು ಸಹಕರಿಸುತ್ತಿದ್ದರು ಎನ್ನಲಾಗಿದೆ. ಚಂದೂರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.

ಇದನ್ನೂ ಓದಿ:ಉನ್ನತ ಸ್ಥಾನದ 100ಕ್ಕೂ ಅಧಿಕ ಅಧಿಕಾರಿಗಳು ಭ್ರಷ್ಟರು.. ಸದನದಲ್ಲಿ ಮಾಹಿತಿ ನೀಡಿದ ಸರ್ಕಾರ

ABOUT THE AUTHOR

...view details