ಟೆಹರಾನ್ :ಇರಾನ್ನ ಅಣು ಸಂಪತ್ತನ್ನು ಶೇಕಡಾ 20ಕ್ಕೆ ಮಿತಿಗೊಳಿಸಲು ಸಾಧ್ಯವಿಲ್ಲ. ದೇಶಕ್ಕೆ ಇನ್ನೂ ಹೆಚ್ಚಿನ ಅಣು ಸಂಪತ್ತು ಅವಶ್ಯಕತೆ ಇದ್ದು, ಶೇಕಡಾ 60ಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇರಾನ್ ನಾಯಕ ಅಯಾತೊಲ್ಲಾ ಸಯ್ಯಿದ್ ಅಲಿ ಖಮೇನಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಖಮೇನಿ ಇರಾನ್ ಬಳಿ ಅಣ್ವಸ್ತ್ರ ಇಲ್ಲ, ರಾಷ್ಟ್ರದ ಅವಶ್ಯಕತೆಗಾಗಿ ಅಣುಸಂಪತ್ತು ಹೆಚ್ಚಿಸಿಕೊಳ್ಳುವುದನ್ನು ಯಾರೂ ತಡೆಯಲಾರರು ಎಂದು ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕ ಮತ್ತು ಮೂರು ಯೂರೋಪಿಯನ್ ರಾಷ್ಟ್ರಗಳ ನಡುವಿನ ಜಂಟಿ ಕ್ರಿಯಾ ಸಮಗ್ರ ಯೋಜನೆ ( ಜೆಸಿಪಿಒಎ) ಒಪ್ಪಂದದ ಬಗ್ಗೆ ಟ್ವಿಟರ್ನಲ್ಲಿ ಖಮೇನಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಟೂಲ್ಕಿಟ್ ವಿವಾದ ಪ್ರಕರಣ: ದಿಶಾ ರವಿಗೆ ಷರತ್ತು ಬದ್ಧ ಜಾಮೀನು
ಕೆಲವು ದಿನಗಳ ಹಿಂದೆ, ಅಮೆರಿಕ ಮತ್ತು ಮೂರು ರಾಷ್ಟ್ರಗಳು ಇರಾನ್ ವಿರುದ್ಧ ದ್ವೇಷದಿಂದ ಮಾತನಾಡಿದ್ದವು. ಇರಾನ್ ಜಂಟಿ ಕ್ರಿಯೆಯ ಸಮಗ್ರ ಯೋಜನೆಯಿಂದ ಹೊರಗುಳಿದ ಬಗ್ಗೆ ಪ್ರಶ್ನೆ ಮಾಡಿದ್ದವು. ಆದರೆ, ಜಂಟಿ ಕ್ರಿಯಾ ಸಮಗ್ರ ಯೋಜನೆಯ ತಮ್ಮ ಜವಾಬ್ದಾರಿಗಳನ್ನು ಆ ದೇಶಗಳು ಉಲ್ಲೇಖಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇರಾನ್ ಅಣ್ವಸ್ತ್ರಗಳನ್ನು ಉತ್ಪಾದನೆ ಮಾಡಲು ಮುಂದಾದರೆ ಯಾವುದೇ ರಾಷ್ಟ್ರವೂ ಕೂಡಾ ತಡೆಯಲು ಸಾಧ್ಯವಿಲ್ಲ. ಇರಾನ್ ಅಣ್ವಸ್ತ್ರ ಉತ್ಪಾದನೆಗೆ ಅವಕಾಶ ಕೊಡುವುದಿಲ್ಲ ಎಂದು ಅಂತಾರಾಷ್ಟ್ರೀಯ ಸಂಘಟನೆಯೊಂದು ಹೇಳಿಕೊಂಡಿದ್ದು, ಆ ಸಂಘಟನೆಯೂ ನಮ್ಮನ್ನು ತಡೆಯಲಾಗದು ಎಂದು ಖಮೇನಿ ಹೇಳಿದ್ದಾರೆ.
ನಮ್ಮ ಬಳಿ ಅಣ್ವಸ್ತ್ರ ಇಲ್ಲ. ಇಸ್ಲಾಮಿಕ್ ತತ್ವಗಳ ಆಧಾರದಲ್ಲಿ ಶಸ್ತ್ರಗಳ ಮೂಲಕ ಸಾಮಾನ್ಯ ಜನರ ಮಾರಣ ಹೋಮ ನಿಷಿದ್ಧ ಎಂದು ಖಮೇನಿ ಟ್ವೀಟ್ ಮಾಡಿದ್ದಾರೆ.