ನವದೆಹಲಿ: ಆ್ಯಪಲ್ ಕಂಪನಿಯು ಒಎಸ್-15 ಮೊಬೈಲ್ ಅನ್ನು ರಿಲೀಸ್ ಮಾಡಿದೆ. ಇದು ಫೇಸ್‌ಟೈಮ್, ನೋಟಿಫಿಕೇಶನ್ ಹಾಗೂ ಇನ್ನಿತರ ಹಲವು ಬದಲಾವಣೆಗಳನ್ನು ಮಾಡಿದೆ. ಫೇಸ್‌ಟೈಮ್ ಆ್ಯಪ್ ಪ್ರಾದೇಶಿಕ ಆಡಿಯೋ ಮತ್ತು ಧ್ವನಿ ಪ್ರತ್ಯೇಕತೆಯ ವೈಶಿಷ್ಟ್ಯವನ್ನು ಹೊಂದಿದೆ.
ಆ್ಯಪಲ್ ಕಂಪನಿಯಿಂದ ಒಎಸ್-15 ಮೊಬೈಲ್ ರಿಲೀಸ್.. ವಿಶೇಷತೆಗಳು ಹೀಗಿವೆ! - ಆ್ಯಪಲ್ ಕಂಪನಿಯಿಂದ ಒಎಸ್-15 ಮೊಬೈಲ್ ರಿಲೀಸ್
ಬಳಕೆದಾರರು ಫೇಸ್ಟೈಮ್ನ ಕರೆಗಳ ಸಮಯದಲ್ಲಿ ಮ್ಯೂಸಿಕ್ ಮತ್ತು ವಿಡಿಯೋ ಶೇರ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಫೇಸ್‌ಟೈಮ್ ಬಳಕೆ ಮಾಡುವಾಗ ಇತರ ಸಂದೇಶ ಕಳಿಸುವ ಲಿಂಕ್ನೊಂದಿಗೆ ಹೊಸ ಬ್ರೌಸರ್ ಓಪನ್ ಆಗುತ್ತದೆ.
ಬಳಕೆದಾರರು ಫೇಸ್ಟೈಮ್ನ ಕರೆಗಳ ಸಮಯದಲ್ಲಿ ಮ್ಯೂಸಿಕ್ ಮತ್ತು ವಿಡಿಯೋ ಶೇರ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಫೇಸ್‌ಟೈಮ್ ಬಳಕೆ ಮಾಡುವಾಗ ಇತರ ಸಂದೇಶ ಕಳಿಸುವ ಲಿಂಕ್ನೊಂದಿಗೆ ಹೊಸ ಬ್ರೌಸರ್ ಓಪನ್ ಆಗುತ್ತದೆ.
ಕಂಪನಿಯು ತನ್ನ WWDC21 ವರ್ಚುಯಲ್ ಅಭಿಯಾನದಲ್ಲಿ ಈ ಬಗ್ಗೆ ಘೋಷಿಸಿದೆ. ಶ್ರವಣ ತೊಂದರೆ ಇರುವವರಿಗೆ ಈ ಫ್ಯೂಚರ್ಗಳು ಅನುಕೂಲವಾಗಲಿವೆ. ಏರ್‌ಪಾಡ್‌ಗಳು ಇತರ ಪ್ರಮುಖ ಓದುವ ಸಾಮರ್ಥ್ಯ ಸಹ ಪಡೆಯುತ್ತವೆ. ಇಂಟರ್ನೆಟ್ ಸಂಪರ್ಕವಿಲ್ಲದೆ, ಪೂರ್ವನಿಯೋಜಿತವಾಗಿ ಆಡಿಯೊ ಆನ್ - ಡಿವೈಸ್ ಅನ್ನು ವೇಗವಾಗಿ ಪ್ರಕ್ರಿಯೆಗೊಳಿಸುತ್ತದೆ. ಆಪಲ್ ತನ್ನ ವಾಲೆಟ್ ಅಪ್ಲಿಕೇಶನ್‌ಗೆ ಮುಂಬರುವ ನವೀಕರಣವನ್ನು ಸಹ ಘೋಷಿಸಿತು. ಅದು ಯುಎಸ್ ಏರ್ಪೋರ್ಟ್ಗಳಲ್ಲಿ ನಿಮ್ಮ ಐಫೋನ್ ಅನ್ನು ಡಿಜಿಟಲ್ ಗುರುತಿನಂತೆ ಬಳಸಲು ಅನುಮತಿಸುತ್ತದೆ.