ಪುರಿ(ಒಡಿಶಾ):ತಾಲಿಬಾನ್ ಅಟ್ಟಹಾಸದಿಂದ ನಲುಗಿರುವ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 169 ಮಂದಿ ಸಾವನ್ನಪ್ಪಿದ್ದರು. ಉಗ್ರರ ಈ ಕೃತ್ಯವನ್ನು ಇಡೀ ಜಗತ್ತು ಖಂಡಿಸಿತ್ತು. ಇನ್ನು, ದುರಂತದಲ್ಲಿ ಸಾವನ್ನಪ್ಪಿದ್ದವರಿಗೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಪುರಿಯ ಕಡಲ ತೀರದಲ್ಲಿ ಮರಳು ಶಿಲ್ಪ ರಚಿಸಿ ನಮನ ಸಲ್ಲಿಸಿದ್ದಾರೆ.
"ಜಗತ್ತಿನ ಎಲ್ಲ ಜನರು ಹಿಂಸೆಯನ್ನು ಬಿಟ್ಟು ಶಾಂತಿಯಿಂದ ಬದುಕಲು" ಎಂದು ಕರೆ ನೀಡಿದ್ದಾರೆ. ಜಗತ್ತಿನ ಅಭಿವೃದ್ಧಿಯ ವಿಚಾರಗಳು, ಸಾಮಾಜಿಕ ಸಮಸ್ಯೆಗಳು, ಕ್ರೀಡೆ, ಆರೋಗ್ಯ ಹೀಗೆ ಹಲವಾರು ವಿಷಯಗಳ ಬಗ್ಗೆ ಸುದರ್ಶನ್ ಪಟ್ನಾಯಕ್ ಮರಳು ಶಿಲ್ಪ ರಚಿಸುತ್ತಾರೆ. ಈ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಪಟ್ನಾಯಕ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.