ಜೈಪುರ: ಖ್ಯಾತ ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ರಾಜಸ್ಥಾನದಲ್ಲಿ 4,500 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಇಚ್ಚಿಸಿದ್ದಾರೆ. ಸೌರಶಕ್ತಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಿತ್ತಲ್ ಭೇಟಿಯಾಗಿದ್ದಾರೆ.
ಈ ವೇಳೆ ನವೀಕರಿಸಬಹುದಾದ ಇಂಧನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನಿಗಮದ ಸಿಎಂಡಿ, ಸುಬೋಧ್ ಕುಮಾರ್ ಗುಪ್ತಾ, ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಶುತೋಷ್ ಪೆಡ್ನೇಕರ್ ಮತ್ತು ವಿಶೇಷ ಕಾರ್ಯದರ್ಶಿ ಅಮಿತ್ ಢಾಕಾ ಉಪಸ್ಥಿತರಿದ್ದರು.