ಕರ್ನಾಟಕ

karnataka

ETV Bharat / bharat

International Yoga Day: ಐಟಿಬಿಪಿ, ಸಿಆರ್​ಪಿಎಫ್​ ಯೋಧರಿಂದ ಯೋಗಾಭ್ಯಾಸ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾರತೀಯ ಸೇನೆಯ ಯೋಧರು ಯೋಗಾಭ್ಯಾಸ ನಡೆಸಿದರು.

Indo-Tibetan Border Police  performs Yoga
ಯೋಗಭ್ಯಾಸದಲ್ಲಿ ನಿರತರಾದ ಯೋಧರು

By

Published : Jun 21, 2021, 7:17 AM IST

Updated : Jun 21, 2021, 7:47 AM IST

ಲಡಾಖ್ :ಜಗತ್ತಿನಾದ್ಯಂತ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಗಡಿಯಲ್ಲಿ ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಫಿಎಫ್) ಯ​ ಯೋಧರು ಯೋಗಾಭ್ಯಾಸ ನಡೆಸಿದರು.

ಪ್ಯಾಂಗಾಂಗ್ ಸರೋವರದ ಬಳಿ ಯೋಗಾಭ್ಯಾಸ ನಡೆಸಿದ ಐಟಿಬಿಪಿ ಯೋಧರು

ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಯೋಧರು ಲಡಾಖ್​ನ ಪ್ಯಾಂಗಾಂಗ್ ಸರೋವರ, ಅರುಣಾಚಲ ಪ್ರದೇಶದ ಲೋಹಿತ್​​ಪುರದ ಪ್ರಾಣಿ ತರಬೇತಿ ಕೇಂದ್ರದಲ್ಲಿ ಕುದುರೆಗಳೊಂದಿಗೆ ಮತ್ತು ಸಮುದ್ರ ಮಟ್ಟದಿಂದ 18,000 ಸಾವಿರ ಎತ್ತರದ ಲಡಾಖ್​ನ ಹಿಮ ಅವೃತ ಪ್ರದೇಶದಲ್ಲಿ ಯೋಗಾಭ್ಯಾಸ ನಡೆಸಿದರು.

ಹಿಮರಾಶಿಯ ಮೇಲೆ ಐಟಿಬಿಪಿ ಜವಾನರಿಂದ ಯೋಗಾಭ್ಯಾಸ

ಜಮ್ಮು ಕಾಶ್ಮೀರದಲ್ಲಿ ಸಿಆರ್​ಎಫ್​ ಜವಾನರು ಕೂಡ ಯೋಗಾಭ್ಯಾಸ ಮಾಡಿದರು.

ಜಮ್ಮು ಕಾಶ್ಮೀರದಲ್ಲಿ ಸಿಆರ್​ಪಿಎಫ್​ ಜವಾನರು ಯೋಗಾಭ್ಯಾಸ ಮಾಡಿದರು

ಯೋಗ ದಿನಾಚರಣೆಯನ್ನು ಸರ್ಕಾರದ ವತಿಯಿಂದಲೇ ಆಚರಿಸಲಾಗುತ್ತಿದ್ದು, ಈಗಾಗಲೇ ಪ್ರಧಾನಿ ಮೋದಿ ಯೋಗ ದಿನಾಚರಣೆಯ ಅಂಗವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪ್ರಮುಖ ಯೋಗ ಕೇಂದ್ರ ಉತ್ತರಾಖಂಡದ ಪತಂಜಲಿ ಯೋಗ ಪೀಠದಲ್ಲಿಯೋ ವಿಶೇಷ ಯೋಗಾಭ್ಯಾಸ ನಡೆಯುತ್ತಿದೆ.

ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಯೋಧರಿಂದ ಯೋಗಾಭ್ಯಾಸ
Last Updated : Jun 21, 2021, 7:47 AM IST

ABOUT THE AUTHOR

...view details