ನವದೆಹಲಿ :ಇತ್ತೀಚೆಗೆ ದೇಶದಲ್ಲಿ ಕಲ್ಲಿದ್ದಲು ಕೊರತೆ (Coal Problem) ಉಂಟಾಗಿ ಸಂಕಷ್ಟ ಎದುರಾಗಿತ್ತು. ಇದೇ ಅವಧಿಯಲ್ಲಿ ಅಂದರೆ 2021-22ರ ಏಪ್ರಿಲ್ ಮತ್ತು ಸೆಪ್ಟೆಂಬರ್‌ನೊಳಗೆ ಭಾರತದ ಕಲ್ಲಿದ್ದಲು ಆಮದು ಶೇ.12.6ರಷ್ಟು ಏರಿಕೆಯಾಗಿದೆ ಎಂದು ಹಡಗು ಕಂಪನಿಗಳು ನೀಡಿದ ಮಾಹಿತಿಯಲ್ಲಿ ಅಂಕಿ-ಅಂಶಗಳು ಬಹಿರಂಗವಾಗಿವೆ.
ಕಲ್ಲಿದ್ದಲು ಆಮದು ಶೇ.12.6ರಷ್ಟು ಹೆಚ್ಚಾಗುವುದರೊಂದಿಗೆ ಒಟ್ಟು 107.34 ಮಿಲಿಯನ್ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ. 2020-21ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 95.30 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿತ್ತು.
ಟಾಟಾ ಸ್ಟೀಲ್ (Tata Steel) ಮತ್ತು ಸ್ಟೀಲ್ ಅಥಾರಿಟಿ ಇಂಡಿಯಾ ಲಿಮಿಟೆಡ್ (Steel Authority of India Limited) ನಡುವಿನ ಜಂಟಿಯಾಗಿ ರೂಪಿಸುವ ಇ-ಕಾಮರ್ಸ್ ಕಂಪನಿಯಾದ ಎಂಜಂಕ್ಷನ್ (Mjunction) ಕೂಡ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದೆ. ದೇಶದಲ್ಲಿ ಕಲ್ಲಿದ್ದಲು ಆಮದು ಈ ಸೆಪ್ಟೆಂಬರ್ನಲ್ಲಿ 14.85 ಮಿಲಿಯನ್ ಟನ್ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.
ಹಿಂದಿನ ಹಣಕಾಸು ವರ್ಷದ ಸೆಪ್ಟೆಂಬರ್ನಲ್ಲಿ 19.04 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ 2021ರಲ್ಲಿ ಕಲ್ಲಿದ್ದಲು ಆಮದುಗಳು ಸೆಪ್ಟೆಂಬರ್ 2020ಕ್ಕಿಂತ ಶೇ.21.97ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಬೆಲೆಗಳಲ್ಲಿ ಸ್ಥಿರವಾದ ಏರಿಕೆ ಕಂಡು ಬಂದಿದೆ.
ಇದನ್ನೂ ಓದಿ:ತಿರುಪತಿಯಲ್ಲಿ ದಕ್ಷಿಣ ವಲಯ ಮಂಡಳಿಯ ಸಭೆ: ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಗ