ಕೊಚ್ಚಿ(ಕೇರಳ): ನೌಕಾ ನೆಲೆ, ನೌಕಾ ಘಟಕಗಳು ಮತ್ತು ನೌಕಾ ಸ್ವತ್ತುಗಳ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಲ್ಲದ ವೈಮಾನಿಕ ವಸ್ತುಗಳನ್ನು(Drone) ಹಾರಿಸುವಂತಿಲ್ಲ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಈ ನಿಷೇಧ ಉಲ್ಲಂಘಿಸಿದ ಆರ್‌ಪಿಎಗಳು (Remote Pilot Aircraft System) ಸೇರಿದಂತೆ ಯಾವುದೇ ಸಾಂಪ್ರದಾಯಿಕವಲ್ಲದ ವೈಮಾನಿಕ ವಸ್ತುವನ್ನು ನಾಶಪಡಿಸಲಾಗುತ್ತದೆ ಅಥವಾ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಐಪಿಸಿ ಸೆಕ್ಷನ್121, 121 ಎ, 287, 336, 337 ಮತ್ತು 338 ರ ಅಡಿಯಲ್ಲಿ ಆಪರೇಟರ್ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ರಕ್ಷಣಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.