ಕರ್ನಾಟಕ

karnataka

ETV Bharat / bharat

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ ಸೇರ್ಪಡೆ - ನೌಕಪಡೆಯ ಉಪ ಮುಖ್ಯಸ್ಥ ಆರ್​ ಹರಿಕುಮಾರ್​

ಭಾರತೀಯ ನೌಕಾಪಡೆಗೆ ಶುಕ್ರವಾರ (ALH) MK III 321ನೇ ಫ್ಲೈಟ್‌ ಮಾದರಿಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್​ಎಸ್​​ ಶಿಕ್ರಾದಲ್ಲಿ ಸೇರ್ಪಡೆಗೊಂಡಿವೆ.

Indian Navy inducts two ALH MK III helicopters
ಲಘು ಹೆಲಿಕಾಪ್ಟರ್‌ ಸೇರ್ಪಡೆ

By

Published : Oct 30, 2021, 10:49 AM IST

ಮುಂಬೈ: ಭಾರತೀಯ ನೌಕಾಪಡೆಯು ಶುಕ್ರವಾರ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು (ALH) MK III ತನ್ನ 321 ಫ್ಲೈಟ್‌ಗೆ ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್​ಎಸ್​ ಶಿಕ್ರಾದಲ್ಲಿ ಸೇರ್ಪಡೆಗೊಂಡಿವೆ.

ಭಾರತೀಯ ನೌಕಾಪಡೆಯ ಪ್ರಕಾರ, ಪ್ರಸ್ತುತ, 321 ವಿಮಾನವು ಚೇತಕ್ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿದೆ, ಇವುಗಳನ್ನು ಹಂತಹಂತವಾಗಿ ಹೆಚ್ಚು ಸಮರ್ಥ ಮತ್ತು ಬಹುಮುಖ ALH MK III ವಿಮಾನಗಳಾಗಿ ಬದಲಾಯಿಸಲಾಗುವುದು, ಅವುಗಳು ಅತ್ಯಾಧುನಿಕ ಕಣ್ಗಾವಲು, ಸಂವಹನ, ಸುರಕ್ಷಾ ಸಾಧನಗಳನ್ನು ಹೊಂದಿವೆ. ಸಮುದ್ರದಲ್ಲಿ ಮತ್ತು ತೀರದಲ್ಲಿ ಹೆಚ್ಚು ಕಾರ್ಯಕ್ಷಮತೆ ಹೊಂದಿರಲಿವೆ.

ನೌಕಪಡೆಯ ಉಪ ಮುಖ್ಯಸ್ಥ ಪಶ್ಚಿಮ ನೌಕಾ ಕಮಾಂಡರ್​ನ ಕಮಾಂಡರ್​ ಇನ್​ ಚೀಫ್​ ಆರ್​ ಹರಿಕುಮಾರ್​ ಈ ವೇಳೆ ಭಾಗವಹಿಸಿದ್ದರು. ಈ ಹೊಸದಾಗಿ ಸೇರ್ಪಡೆಗೊಂಡ ALH MK III ಹೆಲಿಕಾಪ್ಟರ್‌ಗಳು ಮುಂಬೈನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯಗಳಿಗೆ ಇನ್ನಷ್ಟು ಬಲ ನೀಡಲಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಕೇಸ್: ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಸಾಧ್ಯತೆ

ABOUT THE AUTHOR

...view details