ನವದೆಹಲಿ:ಭಾರತ ಚೀನಾ ನಡುವಿನ ಗಡಿ ವಿವಾದ ಹಳೆಯದಾದರೂ ಸಮಸ್ಯೆ ಮಾತ್ರ ಹೊಸದಾಗಿ ಸೃಷ್ಟಿಯಾಗುತ್ತಲೇ ಇರುತ್ತದೆ. ಪೂರ್ವ ಲಡಾಖ್‌ನ ವಿವಾದಿತ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪದಲ್ಲಿ ಚೀನಾ ಯುದ್ಧ ವಿಮಾನವು ಹಾರಾಟ ನಡೆಸಿದ ಬೆನ್ನಲ್ಲೇ ಭಾರತ ಲಡಾಖ್‌ನ ಲೇಹ್‌ನಲ್ಲಿ ರಫೇಲ್ ಯುದ್ಧ ವಿಮಾನವನ್ನು ನಿಯೋಜಿಸಿ ಬಲವಾದ ಎಚ್ಚರಿಕೆಯನ್ನು ನೀಡಿದೆ.
ಲೇಹ್ನ ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದ ಫಾರ್ವರ್ಡ್ ನೆಲೆಯಲ್ಲಿ ರಫೇಲ್ ವಿಮಾನವನ್ನು ಭಾರತ ಸನ್ನದ್ಧವಾಗಿರಿಸಿದೆ ಎಂದು ಈಟಿವಿ ಭಾರತ್‌ಗೆ ವಿಶ್ವಾಸಾರ್ಹನೀಯ ಮೂಲಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಚೀನಾ ಯುದ್ಧ ವಿಮಾನ ಲಡಾಖ್‌ನ ಗಡಿ ಪ್ರದೇಶದಲ್ಲಿ ಹಾದು ಹೋಗಿತ್ತು. ಕುತಂತ್ರಿ ಚೀನಾದ ಮರ್ಮವನ್ನು ಅರಿಯಲು ಸೇನಾಪಡೆ ರಫೇಲ್ ಅನ್ನು ಮುಂದು ಮಾಡಿದೆ.