ನವದೆಹಲಿ:ಕೊರೊನಾ ಪ್ರಕರಣಗಳ ತೀವ್ರ ಕುಸಿತದ ನಂತರ 7 ತಿಂಗಳು ಕೋವಿಡ್ ಲಸಿಕೆಗಳ ರಫ್ತನ್ನು ಸ್ಥಗಿತಗೊಂಡಿದ್ದ ಭಾರತವು ಈಗ ಲಸಿಕೆಗಳ ರಫ್ತನ್ನು ಪುನರಾರಂಭಿಸಿದೆ. ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ , ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ, ಲಸಿಕೆ ರಫ್ತು ಪ್ರಾರಂಭವಾಗಿದೆ ಎಂದು ಶುಕ್ರವಾರ ಪ್ರಕಟಿಸಿದೆ.
ಸೀರಮ್ ಇನ್ಸ್ಟಿಟ್ಯೂಟ್ನಿಂದ ಬಹು ನಿರೀಕ್ಷಿತ COVAX ಪೂರೈಕೆಗಳು ಇಂದು ಪುನರಾರಂಭಗೊಳ್ಳಲಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ರಪಂಚದಲ್ಲಿ ಮತ್ತು ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಲಸಿಕೆ ಪೂರೈಕೆ ಸಮಾನತೆಯನ್ನು ಮರುಸ್ಥಾಪಿಸುವಲ್ಲಿ ಇದು ಬಹಳ ಪ್ರಯೋಜನಕಾರಿ ಎಂದು ಪೂನಾವಾಲಾ ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ, ಹೊಸ ದೈನಂದಿನ ಪ್ರಕರಣಗಳ ಸಂಖ್ಯೆ ದಿನಕ್ಕೆ 2,00,000ಕ್ಕೆ ಇಳಿದ ಕಾರಣ ಕೇಂದ್ರ ಸರ್ಕಾರವು ಲಸಿಕೆ ರಫ್ತನ್ನು ಸ್ಥಗಿತಗೊಳಿಸಿತ್ತು. ಏಪ್ರಿಲ್‌ನಲ್ಲಿ ಕೆಲವು ಆಫ್ರಿಕನ್ ಮತ್ತು ಇತರ ಕಡಿಮೆ - ಆದಾಯದ ದೇಶಗಳಿಗೆ ಸಣ್ಣ ಪ್ರಮಾಣದ ಲಸಿಕೆಗಳನ್ನು ರಫ್ತು ಮಾಡಲು ಸರ್ಕಾರವು ಅನುಮತಿಸಿದ್ದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಕೊನೆಯದಾಗಿ 2.568 ಲಕ್ಷ ಲಸಿಕೆಗಳನ್ನು ಏಪ್ರಿಲ್ 16 ರಂದು ಸಿರಿಯಾಕ್ಕೆ ಕಳುಹಿಸಲಾಗಿದೆ.
ಕೋವಾಕ್ಸಿನ್ಗೆ ಕೆನಡಾ ಒಪ್ಪಿಗೆ: