ಕರ್ನಾಟಕ

karnataka

ETV Bharat / bharat

ದೇಶಾದ್ಯಂತ ಕೋವಿಡ್​​ಗೆ ಒಂದೇ ದಿನ 403 ಮಂದಿ ಬಲಿ.. ಪಾಸಿಟಿವ್ ಕೇಸ್​​​ ಇಳಿಕೆ - ಪಾಸಿಟಿವಿಟಿ ರೇಟ್

ಭಾರತದಲ್ಲೀಗ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,24,24,234ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 3,16,36,469 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

India Covid
ಇಂಡಿಯಾ ಕೋವಿಡ್​

By

Published : Aug 22, 2021, 10:27 AM IST

ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,948 ಹೊಸ ಕೋವಿಡ್​ ಕೇಸ್​ಗಳು ಪತ್ತೆಯಾಗಿದ್ದು, ಶನಿವಾರ ಒಂದೇ ದಿನ 403 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೀಗ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 3,24,24,234ಕ್ಕೆ ಏರಿಕೆಯಾಗಿದ್ದು, ಈವರೆಗೆ ಒಟ್ಟು 4,34,367ಮಂದಿ ಮೃತಪಟ್ಟಿದ್ದಾರೆ.

ಇಲ್ಲಿಯವರೆಗೆ 3,16,36,469 ಮಂದಿ ಮಾರಣಾಂತಿಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳವಾಗುತ್ತಿದೆ. ಉಳಿದಂತೆ 3,53,398 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ನಡುವೆ ದೇಶದಲ್ಲಿ ಲಸಿಕೆ ವಿತರಣೆ ಕಾರ್ಯ ಭರದಿಂದ ಸಾಗಿದ್ದು, ಈವರೆಗೆ 58,14,89,377 ಮಂದಿಗೆ ಲಸಿಕೆ ನೀಡಿದ್ದರೆ, ನಿನ್ನೆ ಒಂದೇ ದಿನ 52,23,612 ಮಂದಿಗೆ ಲಸಿಕೆ ನೀಡಲಾಗಿದೆ.

ಶುಕ್ರವಾರದ ಪ್ರಕರಣಗಳಿಗೆ ಹೋಲಿಸಿದರೆ ನಿನ್ನೆ ಪತ್ತೆಯಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಶುಕ್ರವಾರ ದೇಶದಲ್ಲಿ ಒಟ್ಟು 34,457 ಕೇಸ್​ಗಳು ಪತ್ತೆಯಾಗಿದ್ದವು.

ಓದಿ:Viral Video - ರಸ್ತೆಯಲ್ಲೇ 'ಜಡೆ' ಜಗಳ: ಕೋಚಿಂಗ್​ ಸೆಂಟರ್​ ಮುಂದೆ ವಿದ್ಯಾರ್ಥಿನಿಯರ ಮಾರಾಮಾರಿ!​

ABOUT THE AUTHOR

...view details