ನವದೆಹಲಿ:ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಕಳೆದ 24 ಗಂಟೆಗಳಲ್ಲಿ ಸುಮಾರು 11 ಸಾವಿರಕ್ಕೂ ಹೆಚ್ಚಾಗಿ ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 11,109 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ 49,622 ಕೋವಿಡ್ ಪ್ರಕರಣಗಳು ಸಯಕ್ರಿಯವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ದೈನಂದಿನ ಕೋವಿಡ್ ಪ್ರಕರಣಗಳು 236 ದಿನಗಳಲ್ಲಿ ಅತಿ ಹೆಚ್ಚಾಗಿವೆ. 29 ಸಾವುಗಳೊಂದಿಗೆ ಸಾವಿನ ಸಂಖ್ಯೆ 5,31,064 ಕ್ಕೆ ಏರಿದೆ.
ದೆಹಲಿ ಮತ್ತು ರಾಜಸ್ಥಾನದಿಂದ ತಲಾ ಮೂರು ಸಾವುಗಳು ವರದಿಯಾಗಿದ್ದರೆ, ಛತ್ತೀಸ್‌ಗಢ ಮತ್ತು ಪಂಜಾಬ್‌ನಿಂದ ತಲಾ ಇಬ್ಬರು ಮತ್ತು ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ತಮಿಳುನಾಡು, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನವದೆಹಲಿಯಲ್ಲಿ ಕೊರೊನಾ ಹೆಚ್ಚಳ: ರಾಜಧಾನಿಯಲ್ಲಿ ಹೊಸ ಕೊರೊನಾ ಪ್ರಕರಣಗಳ ತ್ವರಿತವಾಗಿ ಹೆಚ್ಚುತ್ತಿವೆ. ಗುರುವಾರದಂದು ಕಳೆದ 24 ಗಂಟೆಗಳಲ್ಲಿ 1527 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಅಂಕಿ ಅಂಶವು ಬುಧವಾರ ಕಂಡುಬಂದ 1149 ಹೊಸ ಪ್ರಕರಣಗಳಿಗಿಂತ 378 ಹೆಚ್ಚಾಗಿವೆ. ಆದರೆ, ಸೋಂಕಿಗೆ ಒಳಗಾದ ಕೆಲವೇ ರೋಗಿಗಳಲ್ಲಿ ಕೊರೊನಾದ ಗಂಭೀರ ಲಕ್ಷಣಗಳನ್ನು ಕಾಣುತ್ತಿವೆ.
ಕಳೆದ 24 ಗಂಟೆಗಳಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸರ್ಕಾರದ ವರದಿಯ ಪ್ರಕಾರ, ಇಬ್ಬರು ರೋಗಿಗಳಲ್ಲಿ ಒಬ್ಬರ ಸಾವಿಗೆ ಪ್ರಾಥಮಿಕ ಕಾರಣ ಕೊರೊನಾ ಆದರೆ, ಇನ್ನೊಬ್ಬರ ಸಾವಿಗೆ ಕಾರಣ ಇತರ ಕಾಯಿಲೆಗಳು ಎಂದು ಹೇಳಿದ್ದಾರೆ. ಸೋಂಕಿನ ಪ್ರಮಾಣವು ಶೇಕಡಾ 23.8 ರಿಂದ 27.77 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 909 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. 5,499 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಹೊಸ ರೋಗಿಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಸಕ್ರಿಯ ರೋಗಿಗಳ ಸಂಖ್ಯೆಯೂ 3962 ಕ್ಕೆ ಏರಿದೆ.
2212 ರೋಗಿಗಳು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಒಟ್ಟು 223 ಕರೋನಾ ಸೋಂಕಿತ ರೋಗಿಗಳು ಮತ್ತು ಎಂಟು ಕೊರೊನಾ ಶಂಕಿತ ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರಲ್ಲಿ 97 ರೋಗಿಗಳು ಐಸಿಯುನಲ್ಲಿದ್ದಾರೆ. ಕೊರೊನಾ ಸೋಂಕಿತ ರೋಗಿಗಳಲ್ಲಿ 163 ರೋಗಿಗಳು ದೆಹಲಿಯವರು ಮತ್ತು 40 ರೋಗಿಗಳು ದೆಹಲಿಯ ಹೊರಗಿನ ರಾಜ್ಯಗಳಿಂದ ಬಂದವರಾಗಿದ್ದಾರೆ. ಆಸ್ಪತ್ರೆಗಳಿಗೆ 221 ರೋಗಿಗಳ ದಾಖಲಾತಿಯಿಂದಾಗಿ ಕೊರೊನಾಗೆ ಕಾಯ್ದಿರಿಸಿದ ಒಟ್ಟು ಏಳು ಸಾವಿರದ 944 ಹಾಸಿಗೆಗಳಲ್ಲಿ ಈಗ ಏಳು ಸಾವಿರದ 714 ಹಾಸಿಗೆಗಳು ಖಾಲಿ ಇವೆ.
ಮೂರು ಕಂಟೈನ್‌ಮೆಂಟ್ ಝೋನ್ ರಚನೆ: ಬಹಳ ಸಮಯದ ನಂತರ ದೆಹಲಿಯಲ್ಲಿ ಕೊರೊನಾ ಸೋಂಕಿನಿಂದ ಕಂಟೈನ್‌ಮೆಂಟ್ ಝೋನ್‌ಗಳನ್ನು ರಚಿಸಬೇಕಾದ ಪರಿಸ್ಥಿತಿ ಬಂದಿದೆ. ಗುರುವಾರ, ದೆಹಲಿಯಲ್ಲಿ ಮೂರು ಕಂಟೈನ್‌ಮೆಂಟ್ ಝೋನ್‌ಗಳನ್ನು ನಿರ್ಮಿಸಲಾಯಿತು ಮತ್ತು ಈ ಕಂಟೈನ್‌ಮೆಂಟ್ ವಲಯಗಳಲ್ಲಿ ನಾಗರಿಕ ರಕ್ಷಣಾ ಸ್ವಯಂ ಸೇವಕರನ್ನು ನಿಯೋಜಿಸುವ ಮೂಲಕ ಸೋಂಕಿತರ ಮೇಲ್ವಿಚಾರಣೆಯನ್ನು ಪ್ರಾರಂಭಿಸಲಾಯಿತು.
ಓದಿ:24 ತಾಸಲ್ಲಿ 10 ಸಾವಿರ ಹೊಸ ಕೋವಿಡ್ ಕೇಸ್ ಪತ್ತೆ: ಮಹಾರಾಷ್ಟ್ರದಲ್ಲಿ 9 ಸಾವು