ಕರ್ನಾಟಕ

karnataka

By

Published : Nov 29, 2021, 1:35 PM IST

ETV Bharat / bharat

Omicron Scare: ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಡಿಸೆಂಬರ್ 1 ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿವೆ.

guidelines for international arrivals in India
ವಿದೇಶಿ ಪ್ರಯಾಣಿಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ಜಗತ್ತಿನಾದ್ಯಂತ ಕೊರೊನಾ ವೈರಸ್​ನ ಹೊಸ ರೂಪಾಂತರಿ 'ಒಮಿಕ್ರೋನ್' ಹರಡುವ ಭೀತಿ ಎದುರಾಗಿದ್ದು, ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.

ಡಿಸೆಂಬರ್ 1 ರಿಂದ ಈ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಹೊಸ ನಿಯಮಗಳು ಹೀಗಿವೆ..

1. ಪ್ರಯಾಣಿಕರು ವಿಮಾನವನ್ನು ಬುಕ್ ಮಾಡುವ ಮೊದಲು 'ಏರ್ ಸುವಿಧಾ ಪೋರ್ಟಲ್‌'ನಲ್ಲಿ ಫಾರ್ಮ್ ಅನ್ನು ತುಂಬಬೇಕು ಮತ್ತು ಹಿಂದಿನ 14 ದಿನಗಳ ಪ್ರಯಾಣದ ಮಾಹಿತಿಯನ್ನು ನಮೂದಿಸಬೇಕು.

2. ಆರ್​ಟಿ-ಪಿಸಿಆರ್​ ಪರೀಕ್ಷೆಯ ಫಲಿತಾಂಶವನ್ನು ಪ್ರಯಾಣದ ಮೊದಲು ಏರ್ ಸುವಿಧಾ ಪೋರ್ಟಲ್‌ಗೆ ಅಪ್‌ಲೋಡ್ ಮಾಡಬೇಕು. ಪ್ರಯಾಣ ಬೆಳೆಸುವ 72 ಗಂಟೆಗಳ ಒಳಗೆ ಪರೀಕ್ಷೆ ಮಾಡಿಸಿಕೊಂಡಿರಬೇಕು.

3. ಈಗಾಗಲೇ ಒಮಿಕ್ರೋನ್ ವರದಿಯಾಗಿರುವ, ಶಂಕಿತ ಕೇಸ್​ಗಳು ಪತ್ತೆಯಾಗಿರುವ ದೇಶಗಳಿಂದ ಬರುವವರು ಭಾರತಕ್ಕೆ ಬಂದಿಳಿಯುತ್ತಿದ್ದಂತೆಯೇ ಕೋವಿಡ್​ ಪರೀಕ್ಷೆಗೆ ಒಳಗಾಗಬೇಕು. ವರದಿ ಬರುವವರೆಗೂ ವಿಮಾನ ನಿಲ್ದಾಣದಲ್ಲೇ ಕಾಯಬೇಕು.

4. ವರದಿ ನೆಗೆಟಿವ್​ ಬಂದರೂ ಸಹ ಅವರನ್ನು ಏಳು ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ. ಅವರು ಎಂಟು ದಿನಗಳ ನಂತರ ಮತ್ತೆ ಪರೀಕ್ಷೆಗೊಳಗಾಗಬೇಕು. ಆಗ ಮತ್ತೆ ನೆಗೆಟಿವ್​ ಬಂದ ಮೇಲೂ ಮುಂದಿನ ಏಳು ದಿನಗಳವರೆಗೆ ತಮ್ಮ ಮೇಲೆ ನಿಗಾ ಇರಿಸಿಕೊಳ್ಳಬೇಕು.

ಇದನ್ನೂ ಓದಿ: ಒಮಿಕ್ರೋನ್ ಆತಂಕ: ಸಭೆ ಕರೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ.. ಕೇಜ್ರಿವಾಲ್​​ ಸರ್ಕಾರ ಕಟ್ಟೆಚ್ಚರ

B.1.1.529 ಎಂದು ಕರೆಯಲ್ಪಡುವ ಹೊಸ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ. ಇದು ಮರುಸೋಂಕು, ಅಂದರೆ ಕೋವಿಡ್​ನಿಂದ ಗುಣಮುಖರಾದವರಿಗೂ ಮತ್ತೆ ಅಂಟುವ ಅಪಾಯವನ್ನು ಸೂಚಿಸುತ್ತವೆ. ಇದೀಗ ಈ ರೂಪಾಂತರಿ ಕೇಸ್​ಗಳು ಹಾಗೂ ಶಂಕಿತ ಪ್ರಕರಣಗಳು ಯುನೈಟೆಡ್ ಕಿಂಗ್‌ಡಮ್, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲ್ಯಾಂಟ್​, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಇಸ್ರೇಲ್ ದೇಶಗಳಲ್ಲಿ ವರದಿಯಾಗಿವೆ.

ABOUT THE AUTHOR

...view details