ಕರ್ನಾಟಕ

karnataka

ETV Bharat / bharat

30 ಮಿಲಿಯನ್ ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆಯಲು ಭಾರತದೊಂದಿಗೆ ಬಾಂಗ್ಲಾ ಒಪ್ಪಂದ

ಆರೋಗ್ಯ ಸಚಿವ ಜಾಹಿದ್ ಮಾಲೆಕ್ ಮತ್ತು ಭಾರತೀಯ ಹೈಕಮಿಷನರ್ ವಿಕ್ರಮ್ ಕೆ. ದೊರೈಸ್ವಾಮಿ ಅವರ ಸಮ್ಮುಖದಲ್ಲಿ ಢಾಕಾದಲ್ಲಿನ ಸಚಿವಾಲಯದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

mou
mou

By

Published : Nov 5, 2020, 7:43 PM IST

ನವದೆಹಲಿ:ಬಾಂಗ್ಲಾದೇಶ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಬೆಕ್ಸಿಮ್ಕೊ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಈ ಮೂಲಕ ಆಕ್ಸ್‌ಫರ್ಡ್‌ನ ಭಾರತೀಯ ಆವೃತ್ತಿಯಾದ ಅಸ್ಟ್ರಾಜೆನೆಕಾದ ಕೊರೊನಾ ವೈರಸ್ ಲಸಿಕೆಯಾದ ಕೋವಿಶೀಲ್ಡ್ ಮಾನವ ಪ್ರಯೋಗಕ್ಕೆ ಒಪ್ಪಿತವಾದ ಬಳಿಕ 30 ಮಿಲಿಯನ್ ಡೋಸ್ ಪಡೆಯಲು ಬಾಂಗ್ಲಾ ತಯಾರಾಗಿದೆ.

ಆರೋಗ್ಯ ಸಚಿವ ಜಾಹಿದ್ ಮಾಲೆಕ್ ಮತ್ತು ಭಾರತೀಯ ಹೈಕಮಿಷನರ್ ವಿಕ್ರಮ್ ಕೆ. ದೊರೈಸ್ವಾಮಿ ಅವರ ಸಮ್ಮುಖದಲ್ಲಿ ಢಾಕಾದಲ್ಲಿನ ಸಚಿವಾಲಯದ ಕಾನ್ಫರೆನ್ಸ್ ಕೊಠಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಕುರಿತು ಭಾರತೀಯ ಹೈಕಮಿಷನರ್ ವಿಕ್ರಮ್ ಕೆ. ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details